ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಬಿಜೆಪಿ ಪ್ರಚಾರಕ್ಕೆ ತಾರೆಯರ ದಂಡು
ಬೆಂಗಳೂರು, ಶುಕ್ರವಾರ, 28 ಮಾರ್ಚ್ 2008   ( 15:52 IST )
ಕಳೆದ ರಾಜ್ಯ ಚುನಾವಣೆಯಲ್ಲಿ ಚಿತ್ರತಾರೆಗಳನ್ನು ಚುನಾವಣಾ ಪ್ರಚಾರಕ್ಕೆ ಕರೆತರುವ ಮೂಲಕ ಬಿಜೆಪಿ ಮತದಾರರನ್ನು ಓಲೈಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಗೂ ಇದೇ ತಂತ್ರವನ್ನು ರೂಪಿಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿರುವ ಅರುಣ್ ಜೇಟ್ಲಿ ಕಳೆದ ಚುನಾವಣೆಯಲ್ಲಿ ಈ ತಂತ್ರವನ್ನೇ ರೂಪಿಸಿಕೊಂಡು ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರ ಸ್ಥಾಪಿಸಲು ಬಿಜೆಪಿಗೆ ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಅನೇಕ ಚಿತ್ರ ತಾರೆಯನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ತೆರೆಮರೆಯಲ್ಲಿ ಸಾಗುತ್ತಲೇ ಇದೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣಾ ರಂಗು ಏರುತ್ತಿದ್ದಂತೆ, ಚಿತ್ರರಂಗದ ಕನಸಿನ ಕನ್ಯೆಯಾಗಿರುವ ಹೇಮಮಾಲಿನಿ ಅವರನ್ನು ರಾಜ್ಯಕ್ಕೆ ಕರೆತರುವ ಕುರಿತು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ. ಅಲ್ಲದೆ, ಮಾಜಿ ಕ್ರಿಕೆಟ್ ಪಟು ನವಜೋತ್ ಸಿಂಗ್ ಅವರನ್ನು ಕರೆತಂದು ಮತದಾರರನ್ನು ಸೆಳೆಯಲು ಪ್ರಯತ್ನಿಸಿದೆ.

ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ, ಚಿತ್ರನಟ ಶ್ರೀನಾಥ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಕಿರಿತೆರೆ ಹಾಗೂ ಹಿರಿತೆರೆ ತಾರೆಗಳನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಈಗಾಗಲೇ ಶೃತಿ, ಸಾಯಿಕುಮಾರ್, ವಿನಯಾ ಪ್ರಸಾದ್, ಮದನ್ಪಟೇಲ್ ಸೇರಿದಂತೆ ಹಲವು ಚಿತ್ರ ನಟ ನಟಿಯರು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಹಿರಿಯ ಬಿಜೆಪಿ ನಾಯಕರನ್ನು ರಾಜ್ಯ ಚುನಾವಣಾ ಪ್ರಚಾರಕ್ಕೆ ಕರೆಸುವ ಬಗ್ಗೆಯೂ ರಾಜ್ಯ ಬಿಜೆಪಿ ಘಟಕ ತಯಾರಿ ನಡೆಸುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಖ್ಯಮಂತ್ರಿ ಐ ಲವ್ ಯೂ ಬಿಡುಗಡೆಯ ಹಾದಿ ದುರ್ಗಮ
ನಗರದಲ್ಲಿ ನಾಳೆ ಯುವ ಕಾಂಗ್ರೆಸ್ ಸಮಾವೇಶ
ವೃತ್ತಿಪರ ಕೋರ್ಸ್‌ಗಳ ಆರಂಭಕ್ಕೆ ಮುಕ್ತ ವಿವಿ ಚಿಂತನೆ
ರನ್‌ವೇಗೆ ನುಗ್ಗಿದ ಶ್ವಾನರಾಯ: ವಿಮಾನ ಸಂಚಾರಕ್ಕೆ ಅಡಚಣೆ
ಮೆರಾಜುದ್ದೀನ್ ಟೀಕೆಗೆ ಪ್ರತಿಕ್ರಿಯಿಸಿದ ಕೃಷ್ಣ
ಕೃಷ್ಣರಿಗೆ ಅರಳು ಮರಳು: ಕುಮಾರಸ್ವಾಮಿ ಟೀಕೆ
ಗ್ರಹ ಗತಿ
ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
ap
 
ಅಮಿತಾಬ್ ಅಣಕಿಸುವ ಬ್ಯಾನರ್
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ನೀಡಲು ಹೊಸ ಅಸ್ತ್ರವನ್ನು ....
ಯೋಗಗುರುವಿಗೆ ಜೀವಬೆದರಿಕೆ ಪತ್ರ
ಕೊಳವೆಬಾವಿಯಿಂದ ಪಾರಾದ ವಂದನಾ
ಮನರಂಜನೆ
ಚಿತ್ರ ಸುದ್ದಿ - ಕೊಬ್ರಿ ಮಂಜು ಅಲಿಯಾಸ್ ಕೆ.ಮಂಜು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಚುನಾವಣೆಗೆ ನಿಲ್ಲಲು ಬಯಸಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಚುನಾವಣೆ ಅಂದ್ರೆ ಖಾದಿ ಹಾಕಲೇಬೇಕಲ್ವಾ? ಯಾವುದಕ್ಕೂ ಪಕ್ಷದ ವರಿಷ್ಠರು ತೀರ್ಮಾನಿಸಬೇಕಷ್ಟೇ.
ಮುಂದೆ ಓದಿ|ಮತ್ತಷ್ಟು...