ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಲೋಕಸಭೆಗೆ 59 ಮಹಿಳಾಮಣಿಗಳ ಆಯ್ಕೆ
ನವದೆಹಲಿ, ಮಂಗಳವಾರ, 19 ಮೇ 2009   ( 17:23 IST )
ಈ ಬಾರಿ ದಾಖಲೆಯ ಸಂಖ್ಯೆಯ ಮಹಿಳಾ ಸಂಸದರು ಲೋಕಸಭೆ ಪ್ರವೇಶಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷವೊಂದರಿಂದಲೇ 23 ಮಂದಿ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2009ರ ಈ ಬಾರಿಯ ಚುನಾವಣೆಯಲ್ಲಿ 556 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 59 ಮಂದಿಯನ್ನು ಜನರು ಆರಿಸಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನಿಂದ ಅತಿ ಹೆಚ್ಚು ಮಹಿಳಾ ಸಂಸದರು ಆಯ್ಕೆಯಾಗಿದ್ದು, ಬಿಜೆಪಿಯಿಂದ 13 ಮಂದಿ ಆಯ್ಕೆಯಾಗಿದ್ದಾರೆ.

ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಹಾಗೂ ಬಹುಜನ ಸಮಾಜ ಪಾರ್ಟಿಗಳಿಂದ ತಲಾ ನಾಲ್ಕು ಮಹಿಳಾ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ಜನತಾದಳ ಸಂಯುಕ್ತ, ಶಿರೋಮಣಿ ಅಕಾಲಿ ದಳ ಹಾಗೂ ಎನ್‌ಸಿಪಿಗಳಿಂದ ತಲಾ ಇಬ್ಬರು ಮಹಿಳೆಯರು ಸಂಸದರಾಗಿ ಲೋಕಸಭೆ ಹೊಕ್ಕರೆ, ತೆಲಂಗಾಣ ರಾಷ್ಟ್ರೀಯ ಸಮಿತಿ, ರಾಷ್ಟ್ರೀಯ ಲೋಕದಳ, ಶಿವಸೇನೆ, ಡಿಎಂಕೆ ಮತ್ತು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಗಳಿಂದ ತಲಾ ಒಬ್ಬೊಬ್ಬ ಮಹಿಳೆ ಆಯ್ಕೆಯಾಗಿದ್ದಾರೆ.

2004ರ ಚುನಾವಣೆಯಲ್ಲಿ 355 ಮಹಿಳಾ ಅಭ್ರಯರ್ಥಿಗಳು ಕಣಕ್ಕಿಳಿದಿದ್ದು, ಅವರಲ್ಲಿ 45 ಅಭ್ಯರ್ಥಿಗಳು ಲೋಕಸಭೆಗೆ ಪ್ರವೇಶ ಪಡೆದಿದ್ದರು. 1999ರ ಚುನಾವಣೆಯಲ್ಲಿ 284 ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿ 49 ಮಂದಿ ಲೋಕಸಭೆಗೆ ಕಾಲಿಟ್ಟಿದ್ದರು.

ಉತ್ತರ ಪ್ರದೇಶ ಮಹಿಳಾ ಸಂಸದರಲ್ಲಿ ಮೇಲುಗೈ ಸಾಧಿಸಿದ್ದು, ಈ ರಾಜ್ಯವೊಂದರಿಂದಲೇ 13 ಮಹಿಳಾ ಅಭ್ರಯರ್ಥಿಗಳು ವಿಜಯಮಾಲೆ ಧರಿಸಿದ್ದಾರೆ. ನಂತರದ ಸ್ಥಾನ ಏಳು ಮಹಿಳಾ ಸಂಸದರನ್ನು ಆರಿಸಿರುವ ಪಶ್ಚಿಮ ಬಂಗಾಳಕ್ಕೆ. ಇನ್ನು ಉಳಿದಂತೆ, ಮಧ್ಯಪ್ರದೇಶದಲ್ಲಿ ಆರು, ಆಂಧ್ರಪ್ರದೇಶದಲ್ಲಿ ಐದು, ಗುಜರಾತ್, ಪಂಜಾಬ್, ಬಿಹಾರಗಳಲ್ಲಿ ತಲಾ ನಾಲ್ಕು ಮಹಿಳೆಯರು ಆರಿಸಿ ಬಂದಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೋನಿಯಾ ಸಿಪಿಪಿ ಅಧ್ಯಕ್ಷೆ, ಸಿಂಗ್ ನಾಯಕ
ಯುಪಿಎ ಬೆಂಬಲಕ್ಕೆ ತುದಿಗಾಲಲ್ಲಿ ನಿಂತಿರುವ ಬಿಎಸ್ಪಿ, ಎಸ್ಪಿ
ಕಾಂಗ್ರೆಸ್‌ ಅವಮಾನಿಸುತ್ತಿದೆ: ಲಾಲೂ ಕೂಗು
ರಾಜ್ ಜತೆ ಸಂಬಂಧ ಮುರಿದ ಬಾಳಾಠಾಕ್ರೆ
ಲೋಕಸಭೆ ಹೊಕ್ಕ ಕ್ರಿಮಿನಲ್‌ಗಳ ಸಂಖ್ಯೆ ಏರಿಕೆ
ಆಡ್ವಾಣಿ ಸ್ಥಾನಭರ್ತಿಗಾಗಿ ಕಸರತ್ತು
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...