ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಕಾಂಗ್ರೆಸ್‌ ಅವಮಾನಿಸುತ್ತಿದೆ: ಲಾಲೂ ಕೂಗು
ನವದೆಹಲಿ, ಮಂಗಳವಾರ, 19 ಮೇ 2009   ( 12:21 IST )
ಮಹತ್ತರವಾದುದನ್ನು ಸಾಧಿಸುತ್ತೇವೆಂಬ ಭಾವನೆಯೊಂದಿಗೆ ಯುಪಿಎ ಜತೆಗಿದ್ದೇವೆ ಅನ್ನತ್ತಲೇ, ಚುನಾವಣೆ ವೇಳೆ ದೂರ ಸರಿದು ಎಲ್‌ಜೆಪಿ ಮತ್ತು ಸಮಾಜವಾದಿ ಪಕ್ಷದೊಂದಿಗೆ ಸೇರಿ ಹೊಸದೊಂದು ಮೈತ್ರಿ ಮಾಡಿಕೊಂಡಿದ್ದ ಲಾಲೂಪ್ರಸಾದ್ ಯಾದವ್ ಅವರಿಗೀಗ ಹೊಡೆತಗಳ ಮೇಲೆ ಹೊಡೆತಗಳು ಬೀಳುವಂತಿದೆ.

ಭಾರೀ ಆತ್ಮ ವಿಶ್ವಾಸದಿಂದ ಬೀಗಿದ ಲಾಲು ಅವರ ಆರ್‌ಜೆಡಿ ಪಕ್ಷ ಈ ಚುನಾವಣೆಯಲ್ಲಿ ಗಳಿಸಿದ್ದು ಕೇವಲ ನಾಲ್ಕು ಸ್ಥಾನ. ಕಳೆದ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗಳಿಸಿದ್ದ ಆರ್‌ಜೆಡಿ ಈ ಸಲವೂ ಉತ್ತಮ ಮೊತ್ತಗಳಿಸ ಬಹುದು ಎಂಬ ಲಾಲೂ ಚಿಂತನೆ ನುಚ್ಚುನೂರಾಗಿದೆ.

ಚುನಾವಣೆ ವೇಳೆ ತಮ್ಮ ಕೈಬಿಟ್ಟ ಕಾರಣ ಸಿಟ್ಟುಗೊಂಡಿರುವ ಕಾಂಗ್ರೆಸ್ ಲಾಲೂಗೆ ತಕ್ಕ ಪಾಠಕಲಿಸಲು ಮುಂದಾಗಿದ್ದು, ಲಾಲೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಂಶಯವಾಗಿದೆ. ಈ ಅವಮಾನವನ್ನು ಸಹಿಸಲಾಗದ ಲಾಲೂ ಸೋಮವಾರ ನಡೆದ ಸಂಪುಟ ಸಭೆಯಲ್ಲಿ, ಕಾಂಗ್ರೆಸ್ ತನ್ನನ್ಯಾಕೆ ಪದೇಪದೇ ಅವಮಾನಿಸುತ್ತಿದೆ ಎಂದು ಕೇಳಿದ್ದಾರೆ.

ಇದಕ್ಕೂ ಮುನ್ನ ಅವರು ಬಿಹಾರದಲ್ಲಿ ಕಾಂಗ್ರೆಸನ್ನು ಬದಿಗಿಟ್ಟು ಚುನಾವಣೆಗೆ ಸ್ಫರ್ಧಿಸಿರುವುದು ಒಂದು ದೊಡ್ಡ ತಪ್ಪು ಎಂದು 'ತಪ್ಪೊಪ್ಪಿ'ಕೊಂಡಿದ್ದರು.ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ದೂರವಾಣಿ ಕರೆ ನೀಡಿ ಸಂಪುಟ ಸಭೆಗೆ ಆಹ್ವಾನಿಸಿದ್ದರಾದರೂ, ಅವರಿಗೆ ಸಚಿವ ಖಾತೆ ನೀಡುವ ಯಾವುದೇ ಸುಳಿವು ನೀಡಿಲ್ಲ.

ಕಾಂಗ್ರೆಸ್ ಲಾಲು ಪಕ್ಷವನ್ನು ಚುನಾವಣಾ ಪೂರ್ವ ಮಿತ್ರ ಪಕ್ಷವೆಂದು ಪರಿಗಣಿಸುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಲಾಲೂ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್‌ಗೆ ಇಷ್ಟಇಲ್ಲ ಎಂದು ಮೂಲಗಳು ಹೇಳುತ್ತಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಜ್ ಜತೆ ಸಂಬಂಧ ಮುರಿದ ಬಾಳಾಠಾಕ್ರೆ
ಲೋಕಸಭೆ ಹೊಕ್ಕ ಕ್ರಿಮಿನಲ್‌ಗಳ ಸಂಖ್ಯೆ ಏರಿಕೆ
ಆಡ್ವಾಣಿ ಸ್ಥಾನಭರ್ತಿಗಾಗಿ ಕಸರತ್ತು
300 ಕೋಟ್ಯಧಿಪತಿ ಸಂಸದರ ಶ್ರೀಮಂತ ಲೋಕಸಭೆ
ಪ್ರಧಾನಿ ರಾಜೀನಾಮೆ, ಲೋಕಸಭೆ ವಿಸರ್ಜನೆ
ಗುಜರಾತಿನಲ್ಲಿ ಬಿಜೆಪಿಯಿಂದ ಶೇ.0.9 ಕುಸಿತ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...