ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಚಟರ್ಜಿಯವರನ್ನು ಮತ್ತೆ ಸಿಪಿಎಂಗೆ ಕರೆತರುವೆ: ಬುದ್ಧದೇವ್
ಕೋಲ್ಕತಾ, ಸೋಮವಾರ, 11 ಮೇ 2009   ( 13:47 IST )
ಲೋಕಸಭಾ ಸ್ಪೀಕರ್, ಹೆಡ್‌ಮಾಸ್ಟರ್ ಖ್ಯಾತಿಯ ಸೋಮನಾಥ್ ಚಟರ್ಜಿ ಅವರನ್ನು ಸಿಪಿಎಂಗೆ ಮರಳಿ ಕರೆತರಲು ಪ್ರಯತ್ನಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಚಾರ್ಯ ಹೇಳಿದ್ದಾರೆ. ಬೆಂಗಾಳಿ ಸುದ್ದಿವಾಹಿನಿ ಸ್ಟಾರ್ ಆನಂದಗೆ ನೀಡಿರುವ ಸಂದರ್ಶನದಲ್ಲಿ ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯರಾದ ಬುದ್ಧದೇವ್, ಚಟರ್ಜಿಯವರನ್ನು ಕಳಕೊಂಡಿರುವ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

"ಖಂಡಿತವಾಗಿಯೂ ನಾನು ಅವರನ್ನು ರಾಜಕೀಯವಾಗಿ ಕಳೆದುಕೊಂಡಿದ್ದೇನೆ. ಸೋಮನಾಥರಂತ ವ್ಯಕ್ತಿತ್ವದ ನಾಯಕರನ್ನು ಪಕ್ಷದಿಂದ ದೂರ ಇರಿಸಿರುವುದರಿಂದ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ತನಗೆ ತುಂಬ ನೋವಾಗಿದೆ" ಎಂದು ಅವರು ನುಡಿದರು.

ಮಾಜಿ ಸಂಸದ ಸೈಫುದ್ದೀನ್ ಚೌಧುರಿ ಹಾಗೂ ಸೋಮನಾಥ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪಕ್ಷ ತನ್ನೊಬ್ಬನದಲ್ಲ. ತನ್ನಂತೆಯೇ ಹಲವಾರು ಮಂದಿ ಪಕ್ಷದಲ್ಲಿದ್ದಾರೆ. ಆದರೆ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಮರಳಿ ತರಲು ತಾನು ಪ್ರಯತ್ನಿಸುತ್ತಿರುವುದಾಗಿ ಅವರು ನುಡಿದರು.

ಅಣುಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ವೇಳೆ ಅಲ್ಪಸಂಖ್ಯಾತವಾದ ಮನಮೋಹನ್ ಸಿಂಗ್ ಸರ್ಕಾರ, ಸಂಸತ್ತಿನಲ್ಲಿ ಕಳೆದ ಜುಲೈ 22ರಂದು ವಿಶ್ವಾಸ ಮತ ಯಾಚಿಸಿದಾಗ, ಸ್ಥಾನ ತೆರವು ಗೊಳಿಸುವಂತೆ ಪಕ್ಷವು ಚಟರ್ಜಿಯವರಿಗೆ ಸೂಚಿಸಿತ್ತು. ಆದರೆ ಸ್ಪೀಕರ್ ಆಗಿದ್ದ ಚಟರ್ಜಿ ಸ್ಥಾನತೊರೆಯಲು ನಿರಾಕರಿಸಿದಾಗ ಅವರನ್ನು ಪಕ್ಷವು ಉಚ್ಟಾಟಿಸಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಮಿಳು ಸೆಲ್ವಂ ಕುರಿತು ಶೋಕಗೀತೆ ಓದಿದ ಕರುಣಾ
ಪಂಜಾಬಿನಲ್ಲಿ ಎನ್‌ಡಿಎ ಶಕ್ತಿ ಪ್ರದರ್ಶನ
ಕುಟುಂಬ ಯೋಜನೆಯಲ್ಲಿ ವರುಣ್ ಮೃದುಧೋರಣೆ
ರಾಜಪಕ್ಷೆ ವಿರುದ್ಧ ಕ್ರಮಕ್ಕೆ ಮಾನವ ಹಕ್ಕು ಸಂಘಟನೆ ಆಗ್ರಹ
ಪ.ಬಂಗಾಳ, ಬಿಹಾರ, ರಾಜಸ್ತಾನದಲ್ಲಿ ಮರುಮತದಾನ
ಭಯೋತ್ಪಾದನೆಗೆ ಅಪ್ರಾಪ್ತ ವಯಸ್ಕರ ಬಳಕೆ: ನಿಕಂ ಶಂಕೆ
ಗ್ರಹ ಗತಿ
ದೈನಿಕ - ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ನಿಮಗೆ ಇ-ಮೇಲ್ ಅಥವಾ ಪತ್ರವೊಂದು ಬರಬಹುದು. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಚೇರಿಯಲ್ಲಿ ಆಸೀನರಾಗಿ: ಸಚಿವರಿಗೆ ಸಿಎಂ ಕಟ್ಟಾಜ್ಞೆ
ತಿಂಗಳುಗಟ್ಟಲೆ ವಿಧಾನಸೌಧದ ಕಚೇರಿಗಳ ಮುಖವನ್ನೇ ನೋಡದ ಸಚಿವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,
ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಕೋಕಾ ಜಾರಿ
ವಜಾ ಅಲ್ಲ, ಆಂತರಿಕ ಬದಲಾವಣೆ ಅಷ್ಟೆ: ಮೊಯ್ಲಿ
ಮನರಂಜನೆ
ಚಿತ್ರ ಸುದ್ದಿ - ನಿರ್ದೇಶಕ ಎಸ್ ಎಲ್ ಎನ್ ಸ್ವಾಮಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದೇನಪ್ಪ ಅಂದ್ರೆ, ಮೂಕಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರದ ಹೆಸರು ನಿರಂತರ. ಪುಷ್ಪಕ ವಿಮಾನ ಚಿತ್ರದ ನಂತರ ಇಂಥಾ ಚಿತ್ರ ತೆಗೆಯಲು ಯಾರು ಮನಸ್ಸು ಮಾಡಿರಲಿಲ್ಲ.
ಮುಂದೆ ಓದಿ|ಮತ್ತಷ್ಟು...