ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಆಡ್ವಾಣಿ-ಭೈರವ್‌ಸಿಂಗ್ ಮಾತುಕತೆ
ನವದೆಹಲಿ, ಶುಕ್ರವಾರ, 6 ಮಾರ್ಚ್ 2009   ( 12:19 IST )
ತಾನೂ ಚುನಾವಣೆಗೆ ಸ್ಫರ್ಧಿಸಬಹುದು ಎಂದು ಹೇಳುವ ಮೂಲಕ ಪ್ರಧಾನಿ ಸ್ಥಾನದ ಮೇಲೆ ತನ್ನ ಕಣ್ಣೂ ಇದೆ ಎಂಬ ಸೂಚನೆ ನೀಡಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿಯವರಿಗೆ ಮುಜುಗರ ಉಂಟು ಮಾಡಿದ್ದ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು, ಗುರುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಆಡ್ವಾಣಿಯವರನ್ನು ಭೇಟಿ ಮಾಡಿ ಅಚ್ಚರಿಹುಟ್ಟಿಸಿದರಲ್ಲದೆ, ಅವರೊಂದಿಗೆ ಊಟವನ್ನೂ ಮಾಡಿದರು.

"ಶೇಖಾವತ್ ಆಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿಮಾಡಿದ್ದು ಸುಮಾರು ಎರಡು ಗಂಟೆಗಳ ಕಾಲಕಳೆದರು. ಅವರು ಹಿರಿಯ ನಾಯಕರೊಂದಿಗೆ ಊಟವನ್ನೂ ಮಾಡಿದರು" ಎಂಬುದಾಗಿ ಆಡ್ವಾಣಿಯವರಿಗೆ ಹತ್ತಿರದ ಮೂಲಗಳು ತಿಳಿಸಿವೆ.

ಶೇಖಾವತ್ ಅವರು ಉಪರಾಷ್ಟ್ರಪತಿಯಾಗಿದ್ದ ವೇಳೆ ಪಕ್ಷತೊರೆದಿದ್ದರು. ಇವರು ರಾಜಸ್ಥಾನ ವಿಧಾನಸಭಾ ಚುನಾವಣೆಗಳು ನಡೆದ ಬಳಿಕ, ಡಿಸೆಂಬರ್ ತಿಂಗಳಲ್ಲಿ ತಾನೂ ಚುನಾವಣೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದು, ತನ್ನ ಕಣ್ಣೂ ಪ್ರಧಾನಿ ಪಟ್ಟದ ಮೇಲಿದೆ ಎಂಬರ್ಥದ ಮಾತುಗಳನ್ನಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು.

ಆಡ್ವಾಣಿಯಿಂದ ಹಿರಿಯರಾಗಿರುವ ಶೇಖಾವತ್ ಅವರನ್ನು ಆ ವೇಳೆ, 'ನೀವು ಪ್ರಧಾನಿ ಅಭ್ಯರ್ಥಿಯೇ' ಎಂದು ಕೇಳಲಾಗಿದ್ದ ಪ್ರಶ್ನೆಗೆ ಮಹತ್ವಾಕಾಂಕ್ಷಿ ಉತ್ತರ ನೀಡಿದ್ದರು. ವಸುಂಧರರಾಜೆ ನೇತೃತ್ವದ ರಾಜಸ್ಥಾನ ಸರ್ಕಾರದ ಮೇಲಿದ್ದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆಗೂ ಅವರು ಒತ್ತಾಯಿಸಿದ್ದರು. ವಸುಂಧರಾ ಆಡ್ವಾಣಿಯವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.

ಈ ಎಲ್ಲ ವಿವಾದಗಳ ಬಳಿಕ ಈ ಇಬ್ಬರು ಹಿರಿಯ ನಾಯಕರು ಪರಸ್ಪರ ಭೇಟಿ ಮಾಡಿರದಿದ್ದ ಹಿನ್ನೆಲೆಯಲ್ಲಿ ಗುರುವಾರದ ಭೇಟಿ ಮಹತ್ವದ್ದು ಎಂದು ಊಹಿಸಲಾಗದೆ. ಶೇಖಾವತ್ ತಾನೂ ಚುನಾವಣಾ ಸ್ಫರ್ಧಾಕಾಂಕ್ಷಿ ಎಂದು ಹೇಳಿದ್ದ ಬಳಿಕ ಆಡ್ವಾಣಿ ಅವರು ಈ ಕುರಿತು ಮೌನವಹಿಸಿದ್ದರು.

ಆದರೆ, ತನ್ನ ಆರೋಗ್ಯದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು 86ರ ಹರೆಯದ ಶೇಖಾವತ್ ಕಳೆದ ತಿಂಗಳು ಘೋಷಿಸಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಜಕಾರಣ ಕಲಿಕೆ ಶಾಲೆ ಆರಂಭ
ಗಾಂಧೀಜಿ ವಸ್ತುಗಳು ಭಾರತದ ಆಸ್ತಿ : ಪಿಎಂ
26/11: ಉಗ್ರರ ನಿಜ ನಾಮಧೇಯ ಪತ್ತೆ
ಆರು ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಅಧಿಕ
ನವೀನ್ ಚಾವ್ಲಾ ನೇಮಕ ವಿರುದ್ಧ ಅಪೆಕ್ಸ್‌ಗೆ ಅರ್ಜಿ
ಚುನಾವಣೆಯಲ್ಲಿ ಸ್ಪರ್ಧಿಸಲು ಸು.ಕೋ ಮೊರೆ: ದತ್
ಗ್ರಹ ಗತಿ
ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತೇಜಸ್ವಿನಿ ವರ್ತನೆಯಿಂದ ಟಿಕೆಟ್ ತಪ್ಪಿತು: ಡಿಕೆಶಿ
ಸಂಸದೆ ತೇಜಸ್ವಿನಿ ಗೌಡ ತಾವಾಗಿಯೇ ಟಿಕೆಟ್ ತಪ್ಪಿಸಿಕೊಂಡಿದ್ದಾರೆಯೇ ವಿನಃ ಅವರಿಗೆ ಟಿಕೆಟ್ ....
ಪ್ರಧಾನಿಯಾಗುವ ಅರ್ಹತೆ ಆಡ್ವಾಣಿಗಿಲ್ಲ: ದೇಶಪಾಂಡೆ
ಬಿಜೆಪಿ ಮಡಿಲಿಗೆ ಸೇರಲಿರುವ ನಿರ್ಮಲಾ ವೆಂಕಟೇಶ್
ಮನರಂಜನೆ
ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ
ಮುಂದೆ ಓದಿ|ಮತ್ತಷ್ಟು...