ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸ್ಪೀಕರ್ ಚಟರ್ಜಿ ರಾಜಕೀಯ ನಿವೃತ್ತಿ ಘೋಷಣೆ
ನವದೆಹಲಿ, ಶುಕ್ರವಾರ, 27 ಫೆಬ್ರವರಿ 2009   ( 18:15 IST )
ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ನಾಲ್ಕೂವರೆ ವರ್ಷಗಳು ಅಸಂತುಷ್ಟವಾಗಿದ್ದವು ಎಂಬುದಾಗಿ ಚಟರ್ಜಿಯವರು ಹೇಳಿದರಾದರೂ, ತಾನು 'ಸಂತೃಪ್ತಿಯಿಂದ' ತೆರಳುತ್ತಿರುವುದಾಗಿ ಅವರು ಈ ಸಂದರ್ಭದಲ್ಲಿ ನುಡಿದರು.

ಸಿಪಿಎಂ ಜತೆಗಿನ ವೈರುಧ್ಯದ ಕುರಿತು ಮಾತನಾಡಿದ ಅವರು, ತನಗೆ ಪಕ್ಷವನ್ನು ಎದುರು ಹಾಕಿಕೊಳ್ಳುವ ಉದ್ದೇಶವಿರಲಿಲ್ಲ ಎಂದು ನುಡಿದರು. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದಿರುವುದಕ್ಕೆ ಅವರು ತಮ್ಮ ಅಸಮಾಧಾನವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಗುರುವಾರ ಹದಿನಾಲ್ಕನೆ ಲೋಕಸಭೆಯ ಕೊನೆಯ ದಿನವಾಗಿತ್ತು. ಗುರುವಾರದಂದು ಅವರು ಲೋಕಸಭೆಯಲ್ಲಿನ ತನ್ನ ಸ್ಪೀಕರ್ ಅಧಿಕಾರದ ಅನುಭವಗಳನ್ನು ಮೆಲುಕುಹಾಕಿದರು. ಅಶಿಸ್ತಿನಿಂದ ವರ್ತಿಸುವ ಸಂಸದರನ್ನು ಮುಲಾಜಿಲ್ಲದೆ ಗದರುತ್ತಿದ್ದ ಚಟರ್ಜಿ ಇದಕ್ಕಾಗಿ ಮನೆಮಾತಾಗಿದ್ದರು. ಅವರು ಲೋಕಸಭೆಯಲ್ಲಿ ತನ್ನ ಉತ್ತಮ ಮತ್ತು ಕೆಟ್ಟ ಅನುಭವಗಳನ್ನು ಸ್ಮರಿಸಿಕೊಂಡರು.

ತನ್ನ ಪುತ್ರಿಯೊಂದಿಗೆ ಅವರು ತನ್ನ 39 ವರ್ಷಗಳ ಸುದೀರ್ಘವಾದ ಸಂಸತ್ತಿನ ಒಡನಾಟಕ್ಕೆ ವಿದಾಯ ಹೇಳಿದರು.

ವೈಯಕ್ತಿಕವಾಗಿ ತನಗೆ ಇದೊಂದು ಅಪೂರ್ವ ಅವಕಾಶವಾಗಿತ್ತು ಎಂಬುದಾಗಿ ಚಟರ್ಜಿ ಗುರುವಾರ ಹೇಳಿದ್ದರು. ತನ್ನ ಪಕ್ಷವು ಆಡಳಿತಾರೂಢ ಯುಪಿಎ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಾಗ ಸ್ಥಾನ ತ್ಯಜಿಸಲು ನಿರಾಕರಿಸಿರುವ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟನೆಗೊಂಡ ಪ್ರಥಮ ಸ್ಪೀಕರ್ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಕಳೆದ ಜುಲೈ ತಿಂಗಳ 22ನೆ ತಾರೀಕಿನಂದು ಲೋಕಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ಮತಯಾಚನೆ ಮಾಡಿದ್ದ ವೇಳೆ ಸದನದಲ್ಲಿ ನೋಟಿನ ಪ್ರದರ್ಶನ ಮಾಡಿದ್ದು ತನ್ನ ಸೇವಾವಧಿಯಲ್ಲೇ ಅತ್ಯಂತ ದುಃಖಕರ ದಿನ ಎಂದು ಅವರು ಹೇಳಿದ್ದರು.ತನ್ನ ನಿವೃತ್ತಿ ಅವಧಿಯಲ್ಲಿ ಕುಟುಂಬದೊಂದಿಗೆ ಕಾಲಕಳೆಯಲು ಇಚ್ಛಿಸಿರುವ ಚಟರ್ಜಿ, ಕುಟುಂಬ ತನ್ನ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಂಚವನ್ನು ಶೇ.9 ಬಡ್ಡಿ ಜತೆ ಮರಳಿಸಲು ಆದೇಶ
ಅಹಮದಾಬಾದ್: 10,000 ಕೆಜಿ ಬಳಸಿದ ಸಿರಿಂಜ್ ವಶ
ಬಾಂಗ್ಲಾ ದಂಗೆ: ಢಾಕಾಗೆ ಬಸ್ ಸಂಚಾರ ಸ್ಥಗಿತ
ಪಾಕ್ ಪ್ರಶ್ನೆಗಳಿಗೆ ಉತ್ತರಿಸಲು ಗಡುವಿಲ್ಲ: ಪ್ರಣವ್
ಹಣದ ಕಂತೆ ಪ್ರದರ್ಶನ, ಅತ್ಯಂತ ಕೆಟ್ಟ ಕ್ಷಣ: ಚಟರ್ಜಿ
26/11: ಮುಂಬೈ ದಾಳಿಗೆ ಭಾರತೀಯದ್ವಯರ ನೆರವು
ಗ್ರಹ ಗತಿ
ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಚಿವರಿಗೆ ಆರೋಗ್ಯ ತಪಾಸಣೆಗೆ ಖರ್ಗೆ ಸಲಹೆ
ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸರ್ಕಾರದ ಕೆಲ ಸಚಿವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ...
ದೇವರ ಕೋಪಕ್ಕೆ ಮುಖ್ಯಮಂತ್ರಿ ಗುರಿ: ಖರ್ಗೆ
ನ್ಯಾಯಾಧೀಶರಿಗೂ ಚಪ್ಪಲಿ ಸೇವೆ ಮಾಡಿದ ಕೈದಿ
ಮನರಂಜನೆ
ಚಿತ್ರ ಸುದ್ದಿ - ಮಹೇಶ್ ಕುಮಾರ್ ಮತ್ತೊಂದು ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಇವರು ತಮ್ಮ ಮೊದಲ ಚಿತ್ರಕ್ಕೆ 'ಅ' ಎಂದು ನಾಮಕರಣ ಮಾಡಿದ್ದಾರೆ. ಇವರಿಗೆ ವಿಶಿಷ್ಟ ಹೆಸರುಗಳು ಮೂಲಕ ಪ್ರೇಕ್ದಕರನ್ನು ಆಕರ್ಷಿಸಬೇಕೆಂಬ ಆಸೆ
ಮುಂದೆ ಓದಿ|ಮತ್ತಷ್ಟು...