|
| ಬ್ಯಾಂಕ್ ದರೋಡೆ ವಿಫಲಗೊಳಿಸಿದ ದಿಟ್ಟೆದೆಯ ವೃದ್ಧ |
| ನವದೆಹಲಿ, 6 ಜನವರಿ 2009 ( 18:18 IST ) | |
75 ವರ್ಷ ವಯಸ್ಸಿನ ದಿಟ್ಟೆದೆಯ ವೃದ್ಧರೊಬ್ಬರ ಹೋರಾಟದಿಂದಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದ ಕಲ್ಕಾಜಿ ಶಾಖೆಯಲ್ಲಿ ಸಂಭವಿಸಬಹುದಾಗಿದ್ದ ದರೋಡೆ ವಿಫಲಗೊಂಡಿದ್ದು, ನಂತರ ನಡೆದ ಘಟನೆಗಳ ಸರಮಾಲೆಯಲ್ಲಿ ದರೋಡೆಕೋರರು ಮೂರು ಗಂಟೆಗಳ ಬಳಿಕ ಬಲೆಗೆ ಬಿದ್ದರು. ಶಸ್ತ್ರಸಜ್ಜಿತ ದರೋಡೆಕೋರರು ಭದ್ರತಾ ಸಿಬ್ಬಂದಿರಹಿತ, ಕಡ್ಡಾಯ ಸಿಸಿಟಿವಿ ಕ್ಯಾಮೆರಾ ರಹಿತ ಬ್ಯಾಂಕಿನ ಒಳಹೊಕ್ಕರು.
ಇವರನ್ನು ತಡೆಯುವ ಗಂಡೆದೆ ಯಾರಿಗೂ ಇರಲಿಲ್ಲ. ಈ ದರೋಡೆಕೋರರು ಈ ಮುಂಚೆ ಯೂಕೊ ಬ್ಯಾಂಕ್ ದರೋಡೆಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಗ್ಯಾಂಗ್ ನಾಯಕ ಇಸ್ತಿಯಾಕ್ ಕಚ್ಚಾ ಪಿಸ್ತೂಲಿನೊಂದಿಗೆ ಬ್ಯಾಂಕೊಳಗೆ ಪ್ರವೇಶಿಸಿದ. ಅವನನ್ನು ಮಜೀದ್ ಜತೆಗೂಡಿದ್ದು ಗ್ರಾಹಕರ ಬಗ್ಗೆ ನಿಗಾಯಿಡುವ ಕೆಲಸವನ್ನು ಅವನಿಗೆ ವಹಿಸಲಾಗಿತ್ತು. ಇಸ್ತಿಯಾಕ್ ನೇರವಾಗಿ ಶಾಖೆಯ ಮ್ಯಾನೇಜರ್ ಪ್ರೇಂ ಚಂದ್ ಭೈರವ್ ಅವರ ಕ್ಯಾಬಿನ್‍ನೊಳಕ್ಕೆ ಹೊಕ್ಕ.
ಮ್ಯಾನೇಜರ್ ನೆರವಿಗಾಗಿ ಕೂಗುತ್ತಿದ್ದರಂತೆ 75 ವರ್ಷ ವಯಸ್ಸಿನ ಗ್ರಾಹಕ ಮಹಾರಾಜ ಕೃಷ್ಣ ಕಪೂರ್ ತಮ್ಮ ಕ್ಯಾಬಿನ್ನಿನೊಳಕ್ಕೆ ಪ್ರವೇಶಿಸಿ, ದುಷ್ಕರ್ಮಿಯ ಕಾಲರ್ ಹಿಡಿದರು. ಇಬ್ಬರೂ ಸೇರಿ ಬ್ಯಾಂಕಿನ ಮಧ್ಯಭಾಗಕ್ಕೆ ಅವನನ್ನು ಎಳೆತಂದರೆಂದು ಹೇಳಲಾಗಿದೆ.
ಪಿಸ್ತೂಲಿನಿಂದ ದುಷ್ಕರ್ಮಿ ಹಾರಿಸಿದ ಗುಂಡು ಗುರಿತಪ್ಪಿದ ಬಳಿಕ ಆರೋಪಿಗಳು ತಪ್ಪಿಸಿಕೊಂಡರೆಂದು ಹೇಳಲಾಗಿದೆ.ಸಂಜೆ 4.16ಕ್ಕೆ ಇಸ್ತಿಯಾಕ್ , ಮಜೀದ್ ಬೈಕನ್ನು ತೆಗೆದುಕೊಂಡು ಹೋಗಲು ವಾಪಸ್ ಬಂದಾಗ ಅವರಿಗೆ ಕಾದಿದ್ದ ಪೊಲೀಸರು ಅವರ ಮೇಲೆ ಹಠಾತ್ತನೆ ದಾಳಿ ಮಾಡಿ ಬಂಧಿಸಿದರೆಂದು ಹೇಳಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|