|
| ಮುಂದುವರಿದ ಪೂಂಚ್ ಗುಂಡಿನ ಚಕಮಕಿ |
| ಪೂಂಚ್, 6 ಜನವರಿ 2009 ( 17:54 IST ) | |
ಜಮ್ಮುವಿನ ಪೂಂಚ್ ಬಳಿಯ ಮೆಂಧಾರ್ ವಲಯದ ಅರಣ್ಯಗಳಲ್ಲಿ ಅಡಗಿರುವ ಉಗ್ರಗಾಮಿಗಳ ಸುತ್ತ ಸೇನೆ ಮತ್ತು ಭದ್ರತಾಪಡೆಗಳು ಮೂರು ಹಂತಗಳ ಮುತ್ತಿಗೆಯನ್ನು ಬಿಗಿಗೊಳಿಸಿದೆ. ಗುಂಡಿನ ಚಕಮಕಿ 7ನೇ ದಿನಕ್ಕೆ ಮುಂದುವರಿದಂತೆ ಉಗ್ರಗಾಮಿಗಳನ್ನು ಭದ್ರತಾಪಡೆಗಳು ಸುತ್ತುವರಿದಿದ್ದು, ಇತ್ತೀಚಿಗೆ ಜಮ್ಮುಕಾಶ್ಮೀರದಲ್ಲಿ ನಡೆದ ಸುದೀರ್ಘ ಚಕಮಕಿಗಳಲ್ಲಿ ಇದು ಒಂದಾಗಿದೆ.
ಸುಮಾರು 10 ಜನ ಭಯೋತ್ಪಾದಕರು ಸಾಕಷ್ಟು ಆಹಾರ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದಾಸ್ತಾನಿನೊಂದಿಗೆ ಅಡಗಿಕೊಂಡಿದ್ದಾರೆ. ಭಯೋತ್ಪಾದಕರ ನಡುವೆ ಸಂಭಾಷಣೆಯ ಕದ್ದಾಲಿಕೆಯಿಂದ ನಾಲ್ಕು ಉಗ್ರಗಾಮಿಗಳು ಗುಂಡಿನ ಕಾಳಗದಲ್ಲಿ ಸತ್ತಿರುವುದು ದೃಢಪಟ್ಟಿದ್ದು, ಅವರ ದೇಹಗಳನ್ನು ಪತ್ತೆಹಚ್ಚಬೇಕಾಗಿದೆ. ಇಬ್ಬರು ಯೋಧರು ಮತ್ತು ಒಬ್ಬ ಪೊಲೀಸ್ ಕೂಡ ಜೀವ ಕಳೆದುಕೊಂಡಿದ್ದಾರೆ.
ಭಯೋತ್ಪಾದಕರು ಪ್ರಸಕ್ತ ನೈಸರ್ಗಿಕ ಗುಹೆಗಳನ್ನು ಭದ್ರಪಡಿಸಿ ಕಾಂಕ್ರೀಟ್ ಬಂಕರ್‌ಗಳನ್ನು ನಿರ್ಮಿಸಿದ್ದಾರೆ. ಗುಂಡಿನ ಚಕಮಕಿ ಇನ್ನೂ ಮುಂದುವರಿದಿದ್ದು, ಉಗ್ರಗಾಮಿಗಳು ನಿರ್ಮಿಸಿದ ಕನಿಷ್ಠ ಒಂದು ಬಂಕರನ್ನು ಭದ್ರತಾಪಡೆ ನಾಶಮಾಡಿದೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ 1500ಕ್ಕೂ ಹೆಚ್ಚು ಭದ್ರತಾಸಿಬ್ಬಂದಿ ಪಾಲ್ಗೊಂಡಿದ್ದಾರೆ. ಕಾರ್ಯಾಚರಣೆಯು ಅರಣ್ಯದ 8 ಚದರ ಕಿಮೀ ವ್ಯಾಪ್ತಿಯವರೆಗೆ ಹಬ್ಬಿದೆ
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|