|
| ಕಸಬ್ ಪೊಲೀಸ್ ಕಸ್ಟಡಿ ಜನವರಿ 19 ತನಕ ವಿಸ್ತರಣೆ |
| ಮುಂಬೈ, 6 ಜನವರಿ 2009 ( 16:13 IST ) | |
ಮುಂಬೈ ಉಗ್ರರ ದಾಳಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಏಕಮಾತ್ರ ಉಗ್ರ ಅಜ್ಮಲ್ ಅಮೀರ್ ಕಸಬ್‌ನ ಪೊಲೀಸ್ ಕಸ್ಟಡಿಯನ್ನು ಜನವರಿ 19ರ ವರೆಗೆ ವಿಸ್ತರಿಸಲಾಗಿದೆ. ಕಸಬ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಆಜಾದ್ ಮೈದಾನ್ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾದ ಕಾಮಾ ಆಸ್ಪತ್ರೆ ಗೋಲಿಬಾರ್ ಪ್ರಕರಣದಲ್ಲಿ ಆತನನ್ನು ಪೊಲೀಸ್ ರಿಮಾಂಡ್‌ಗೆ ಕಳುಹಿಸಲಾಗಿತ್ತು. ಆತನ ಪೊಲೀಸ್ ಕಸ್ಟಡಿ ಇಂದು ಕೊನೆ ಗೊಂಡಿತ್ತು.
ಕಾನೂನು ಪ್ರನಿಧಿತ್ವ ಹೊಂದಿರದ ಅಜ್ಮಲ್‌ನನ್ನು ಭದ್ರತಾ ಆತಂಕದ ಹಿನ್ನೆಲೆಯಲ್ಲಿ ನ್ಯಾಯಾಲಯದ ಎದುರು ಹಾಜರು ಪಡಿಸಲಿಲ್ಲ. ಗೋಲಿಬಾರ್ ಸಂಭವಿಸಿದ ಕಾಮಾ ಆಸ್ಪತ್ರೆ ಘಟನೆ ಕುರಿತು ತನಿಖೆ ನಡೆಸಬೇಕಾಗಿರುವ ಬಗ್ಗೆ ತಾವು ವಾದಿಸಿದೆವು ಎಂದು ಹೆಚ್ಚುವರಿ ಸಾರ್ವಜನಿಕ ಅಭಿಯೋಕ್ತಿ ಇಬಿ ಧಮಾಲ್ ತಿಳಿಸಿದರು.
ಸ್ಕೋಡಾ ವಾಹನವನ್ನು ಅಪಹರಣಗೈದ ಹಾಗೂ ರೈಫಲ್‌ನಿಂದ ವಾಹನ ಚಾಲಕನನ್ನು ಗದರಿಸಿದ್ದಕ್ಕಾಗಿ ಮರೀನ್ ಡ್ರೈವ್ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬ್‌ನನ್ನು ಜನವರಿ 6ರ ತನಕ ಪೊಲೀಸ್ ಕಸ್ಟಡಿಗೆ ವಹಿಸಿಕೊಡಲಾಗಿತ್ತು.
ಪೊಲೀಸ್ ಮೂಲಗಳು ಪ್ರಕಾರ, ನವಂಬರ್ 26ರ ದಾಳಿಗೆ ಸಂಬಂಧಿಸಿದಂತೆ ಕಸಬ್ ವಿರುದ್ಧ ಸುಮಾರು 12 ಪ್ರಕರಣಗಳು ದಾಖಲಾಗಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|