ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಉಗ್ರರ ನಿಗ್ರಹಕ್ಕೆ ಕಾರ್ಯಸಾಧ್ಯ ದೃಷ್ಟಿಕೋನ ಅಗತ್ಯ: ಚಿದು
ನವದೆಹಲಿ, 6 ಜನವರಿ 2009   ( 16:12 IST )
ಭಯೋತ್ಪಾದನೆ ನಿಗ್ರಹದಲ್ಲಿ ಕಾರ್ಯಸಾಧ್ಯ ದೃಷ್ಟಿಕೋನವನ್ನು ಹೊಂದುವ ಅಗತ್ಯದ ಬಗ್ಗೆ ಒತ್ತಿ ಹೇಳಿದ ಕೇಂದ್ರ ಗೃಹ ಸಚಿವ ಪಿ ಚಿದಂಬರಂ, ಉಗ್ರರಿಗಾಗಿನ ಪ್ರತ್ಯುತ್ತರ ಪ್ರಬಲ, ತ್ವರಿತ ಹಾಗೂ ನಿರ್ಣಾಯಕವಾಗಿರಬೇಕು ಎಂದು ತಿಳಿಸಿದರು.

ಆಂತರಿಕ ಭದ್ರತೆ ಮೇಲಿನ ಮುಖ್ಯಮಂತ್ರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ, ಭಯೋತ್ಪಾದನೆ ನಿಗ್ರಹ ಸರಕಾರದ ಅಗ್ರ ಪ್ರಾಶಸ್ತ್ಯವಾಗಿದೆ ಎಂದು ಹೇಳಿದರು. ಕೇಂದ್ರ ಸರಕಾರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ ಅವರು, ಉಗ್ರರ ವಿರುದ್ಧ ಸಂಘಟಿತ ಪ್ರತಿಕ್ರಿಯೆ ಬರುವಲ್ಲಿ ಸಹಕರಿಸುವಂತೆ ಮುಖ್ಯಮಂತ್ರಿಗಳಿಗೆ ಕರೆ ನೀಡಿದರು.

ಯಾವುದೇ ಇತರ ಪರಿಗಣನೆಗಿಂತ ಹೆಚ್ಚಾಗಿ ಜನರ ಭದ್ರತೆ ಉನ್ನತದಲ್ಲಿರುವುದನ್ನು ಖಾತ್ರಿಗೊಳಿಸಬೇಕು ಎಂದು ಹೇಳಿದ ಚಿದು, ಆಧುನೀಕರಣಗೊಳ್ಳುತ್ತಿರುವ ಉಗ್ರರ ದಾಳಿಗಳನ್ನು ನಿಭಾಯಿಸುವಲ್ಲಿನ ಸಿದ್ಧತಾ ಮಟ್ಟದ ವರ್ಧನೆ ಮತ್ತು ಭಯೋತ್ಪಾದಕ ಬೆದರಿಕೆಗಾಗಿನ ನಿಖರ ಹಾಗೂ ತ್ವರಿತ ಪ್ರತ್ಯುತ್ತರ ವರ್ಧನೆ ಎಂಬ ಎರಡು ಮುಖ್ಯ ಉದ್ದೇಶಗಳನ್ನು ಪಟ್ಟಿ ಮಾಡಿದರು.

ಸ್ಥಳೀಯ ಗುಪ್ತಚರ ಮಾಹಿತಿಯ ಪ್ರಾಮುಖ್ಯತೆಯನ್ನು ತಿಳಿಸಿದ ಗೃಹ ಸಚಿವರು ಸ್ಥಳೀಯ ಪೊಲೀಸರು ಅತ್ಯುತ್ತಮ ಗುಪ್ತಚರ ಮಾಹಿತಿಯ ಮೂಲವಾಗಿ ಉಳಿದುಕೊಂಡಿದೆ ಎಂದು ಹೇಳಿದರು ಮತ್ತು ಸ್ಥಳೀಯ ಪೊಲೀಸ್ ಮಟ್ಟದಲ್ಲಿ ಗುಪ್ತಚರ ಮಾಹಿತಿಯನ್ನು ಗಟ್ಟಿಗೊಳಿಸುವಂತೆ ರಾಜ್ಯಗಳಲ್ಲಿ ಮನವಿ ಮಾಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ಉಗ್ರವಾದವನ್ನು ರಾಷ್ಟ್ರ ನೀತಿಯಾಗಿ ಬಳಸುತ್ತಿರುವ ಪಾಕ್'
ಪತಿಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣದೊಂದಿಗೆ ಪರಾರಿ
ಮುಂಬೈ ದಾಳಿಯಲ್ಲಿ ಪಾಕ್ ಸಂಸ್ಥೆಗಳ ಕೈವಾಡ: ಮೆನನ್
ಜಮ್ಮು ಕಾಶ್ಮೀರ ಸಿಎಂರಾಗಿ ಓಮರ್ ಅಬ್ದುಲ್ಹಾ ಪ್ರಮಾಣ ವಚನ
5ನೇ ದಿನಕ್ಕೆ ಪೂಂಚ್ ಎನ್‌ಕೌಂಟರ್; 2 ಜವಾನರಿಗೆ ಗಾಯ
ಐಜಿಐಯಲ್ಲಿ ವಿಮಾನ ಹಾರಾಟ ಸಹಜತೆಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...