ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
'ಉಗ್ರವಾದವನ್ನು ರಾಷ್ಟ್ರ ನೀತಿಯಾಗಿ ಬಳಸುತ್ತಿರುವ ಪಾಕ್'
ನವದೆಹಲಿ , 6 ಜನವರಿ 2009   ( 16:07 IST )
ಮುಂಬೈ ದಾಳಿಗೆ ಸಂಬಂಧಿಸಿದಂತೆ ತನ್ನ ನಿರಂತರ ನಿರಾಕರಣೆಯ ವಿರುದ್ಧ ಕಠಿಣ ಶಬ್ದಗಳಲ್ಲಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ಪಾಕಿಸ್ತಾನ ಭಯೋತ್ಪಾದನೆಯನ್ನು ರಾಷ್ಟ್ರ ನೀತಿಯಾಗಿ ಬಳಸುತ್ತಿದ್ದು, ಮುಂಬೈ ಉಗ್ರರ ದಾಳಿಯ ಸೇನಾ ನಿಖರತೆ ಮತ್ತು ಚಾತುರ್ಯವನ್ನು ನೋಡಿದರೆ ಅದಕ್ಕೆ ಅಲ್ಲಿನ ಕೆಲ ಸರಕಾರಿ ಸಂಸ್ಥೆಗಳ ಬೆಂಬಲ ಇರುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಪಾಕಿಸ್ತಾನದಲ್ಲಿನ ಉಗ್ರರ ಮೂಲಸೌಕರ್ಯದ ಉಸ್ತುವಾರಿಗಳು ನೇಪಾಳ ಮತ್ತು ಬಾಂಗ್ಲಾ ಮುಖಾಂತರ ಉಗ್ರರುಗಳನ್ನು ಭಾರತದೊಳಕ್ಕೆ ನುಸುಳಿಸುತ್ತಾರೆ ಎಂದು ಪ್ರಧಾನಿ ತಿಳಿಸಿದರು. ಆಂತರಿಕ ಭದ್ರತೆ ಮೇಲಿನ ಮುಖ್ಯಮಂತ್ರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್, ಹಲವು ಬೆದರಿಕೆಗಳನ್ನು ತಡೆಯುವಾಗಿನ ದೇಶದ ಭದ್ರತಾ ವ್ಯವಸ್ಥೆ ಸೂಕ್ತವಾಗಿಲ್ಲ ಎಂಬ ಆತಂಕ ಇರಬಹುದು ಮತ್ತು ಆಂತರಿಕ ಭದ್ರತಾ ಬೆದರಿಕೆಯನ್ನು ನಿಭಾಯಿಸುವ ಸಾಧನಗಳು ದಕ್ಷ ತಂತ್ರ ಕೌಶಲವನ್ನು ಹೊಂದಿಲ್ಲ ಎಂಬ ಬಗ್ಗೆ ಟೀಕೆಗೆಳು ಇರಬಹುದು ಎಂದು ಹೇಳಿದರು.

ಮಾನವ ಗುಪ್ತಚರ ಮತ್ತು ತಾಂತ್ರಿಕ ಸಂಕೇತಗಳ ಸಂಗ್ರಹಕ್ಕಾಗಿನ ತಮ್ಮ ವ್ಯವಸ್ಥೆಯ ದಕ್ಷತೆಯನ್ನು ಪರಾಮರ್ಶಿಸುವ ಅಗತ್ಯ ಇದೆ. ತಮ್ಮ ಭದ್ರತಾ ಪಡೆಗಳಿಗೆ ಕೊಡ ಮಾಡಲಾದ ತರಬೇತಿ ಮತ್ತು ಸಲಕರಣೆಗಳತ್ತಲೂ ಜಾಗರೂಕ ಅವಲೋಕನ ಅಗತ್ಯ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಸಾಕಷ್ಟು ಅಂಶಗಳನ್ನು ನಿರ್ವಹಿಸಬೇಕಾಗಿದೆ ಎಂದು ಒಪ್ಪಿಕೊಂಡ ಸಿಂಗ್, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಗುರಿಯನ್ನು ವೇಗ, ದಕ್ಷತೆ ಹಾಗೂ ಬಹುತೇಕ ಸಮರ್ಪಣಾ ಭಾವದೊಂದಿಗೆ ಪೂರೈಸಬೇಕು ಎಂದು ಕರೆ ನೀಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪತಿಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣದೊಂದಿಗೆ ಪರಾರಿ
ಮುಂಬೈ ದಾಳಿಯಲ್ಲಿ ಪಾಕ್ ಸಂಸ್ಥೆಗಳ ಕೈವಾಡ: ಮೆನನ್
ಜಮ್ಮು ಕಾಶ್ಮೀರ ಸಿಎಂರಾಗಿ ಓಮರ್ ಅಬ್ದುಲ್ಹಾ ಪ್ರಮಾಣ ವಚನ
5ನೇ ದಿನಕ್ಕೆ ಪೂಂಚ್ ಎನ್‌ಕೌಂಟರ್; 2 ಜವಾನರಿಗೆ ಗಾಯ
ಐಜಿಐಯಲ್ಲಿ ವಿಮಾನ ಹಾರಾಟ ಸಹಜತೆಗೆ
ಮುಂಬೈ ದಾಳಿ ಸಾಕ್ಷ್ಯಾಧಾರ ಪಾಕ್‌ಗೆ ಹಸ್ತಾಂತರ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...