ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
5ನೇ ದಿನಕ್ಕೆ ಪೂಂಚ್ ಎನ್‌ಕೌಂಟರ್; 2 ಜವಾನರಿಗೆ ಗಾಯ
ಜಮ್ಮು , 5 ಜನವರಿ 2009   ( 13:45 IST )
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವಿನ ಭೀಕರ ಗುಂಡಿನ ಕಾಳಗ ಇಂದು 5ನೇ ದಿನಕ್ಕೆ ಪ್ರವೇಶಿಸಿದ್ದು, ಈ ವೇಳೆ ಇಬ್ಬರು ಜವಾನರು ಗಾಯಗೊಂಡಿದ್ದಾರೆ.

ಪೂಂಚ್ ಜಿಲ್ಲೆಯ ಮೆಂಧಾರ್ ಟೆಹ್ಸಿಲ್‌ನಲ್ಲಿನ ನಿಯಂತ್ರಣ ರೇಖೆಯ ಬಳಿಯ ಭಾಟಿ ಧಾರ್ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಉಗ್ರರನ್ನು ಗುರಿಯಾಗಿಸಿ ಸೇನೆ ರಾಕೆಟ್ ಹಾಗೂ ಮೋರ್ಟರುಗಳನ್ನು ಹಾರಿ ಬಿಟ್ಟಿತು ಎಂದು ಭದ್ರತಾ ಮೂಲಗಳು ತಿಳಿಸಿವೆ.

ರಾಜ್ಯ ಪೊಲೀಸ್‌ನ ಕಮಾಂಡೊ ಹಾಗೂ ವಿಶೇಷ ಪಡೆಗಳ ಜತೆಗೂಡಿ ಸೇನೆ ಅಡಗು ತಾಣವನ್ನು ಧ್ವಂಸಗೊಳಿಸಲು ಪ್ರಖರ ಕಾರ್ಯಾಚರಣೆ ನಡೆಸಲು ಮತ್ತು ಉಗ್ರರನ್ನು ತಟಸ್ಥಗೊಳಿಸಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಪುನರಾರಂಭಗೊಂಡ ಗುಂಡಿನ ಕಾಳಗದ ವೇಳೆ ರಾಕೆಟ್ ಮತ್ತು ಮೋರ್ಟಾರ್ ದಾಳಿ ನಡೆಸಿದ ಬಳಿಕ ಉಗ್ರರು ಅಡಗಿರುವ ಗುಹೆಯ ಸುತ್ತ ದಟ್ಟವಾದ ಹೊಗೆ ಆವರಿಸಿತ್ತು ಎಂದು ಅವರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಇಬ್ಬರು ಜವಾನರು ಗಾಯಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಟ್ಟ ಮಂಜು ಮತ್ತು ಕೆಟ್ಟ ಗೋಚರತೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿರುವ ಹೊರತಾಗಿಯೂ, ಅಡಗು ತಾಣವನ್ನು ಧ್ವಂಸಗೊಳಿಸಲು ಇಂದು ಬೆಳಗ್ಗೆ ಭಾರೀ ಪ್ರಹಾರವನ್ನು ಆರಂಭಿಸಲಾಯಿತು ಎಂದು ಭದ್ರತಾ ಮೂಲಗಳು ತಿಳಿಸಿವೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐಜಿಐಯಲ್ಲಿ ವಿಮಾನ ಹಾರಾಟ ಸಹಜತೆಗೆ
ಮುಂಬೈ ದಾಳಿ ಸಾಕ್ಷ್ಯಾಧಾರ ಪಾಕ್‌ಗೆ ಹಸ್ತಾಂತರ
ಜುಹು ಮೋಜಿನಕೂಟದಲ್ಲಿ ಶೇ.92 ಮದ್ಯವ್ಯಸನಿಗಳು
ಮಹಿಳೆಗೆ ಎಚ್‌ಐವಿ ಚುಚ್ಚುಮದ್ದು ನೀಡಿದ ಪ್ರೇಮಿ
ತೀವ್ರಗೊಂಡ ಚಳಿಗಾಳಿ, ಮತ್ತೆ 15 ಮಂದಿ ಸಾವು
ಗಟ್ಟಿಯಾದ ಖಾತರಿಗಳನ್ನು ಪಾಕ್ ನೀಡಬೇಕು: ಚಿದಂಬರಂ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...