|
| ಜುಹು ಮೋಜಿನಕೂಟದಲ್ಲಿ ಶೇ.92 ಮದ್ಯವ್ಯಸನಿಗಳು |
| ಮುಂಬೈ, 5 ಜನವರಿ 2009 ( 11:38 IST ) | |
ಜುಹು ಮೋಜಿನ ಕೂಟದಲ್ಲಿ ಕಳೆದ ಅಕ್ಟೋಬರ್ 5ರಂದು ಬಂಧಿತರಾದ ನಟ ಆದಿತ್ಯ ಪಾಂಚೋಲಿ ಪುತ್ರಿ ಸಾನಾ ಸೇರಿದಂತೆ ಎಲ್ಲ ಯುವತಿಯರು ಮಾದಕಪದಾರ್ಥ ಸೇವಿಸಿರುವುದು ಪತ್ತೆಯಾಗಿದೆ. ಮೋಜಿನಕೂಟದಲ್ಲಿ ಪಾಲ್ಗೊಂಡ 246 ಜನರಲ್ಲಿ 227 ಅಂದರೆ ಶೇ.92ರಷ್ಟು ಮಂದಿ ಮಾದಕವಸ್ತು ಸೇವನೆಗೆ ಸಕಾರಾತ್ಮಕ ಫಲಿತಾಂಶ ಬಂದಿದೆ.
ಪಾರ್ಟಿಯಲ್ಲಿ ವಿದ್ಯಾರ್ಥಿಗಳು, ಫ್ಯಾಷನ್ ವಿನ್ಯಾಸಕರು, ಉದ್ಯಮಿಗಳು ಮತ್ತು ರೂಪದರ್ಶಿಯರು ಪಾಲ್ಗೊಂಡಿದ್ದರು. ಶಕ್ತಿಕಪೂರ್ ಪುತ್ರ ಸಿದ್ಧಾಂತ್ ಕೂಡ ಮೋಜಿನಕೂಟದಲ್ಲಿದ್ದು ಮಾದಕವಸ್ತು ಸೇವಿಸಿದ್ದನೆಂಬುದು ತಿಳಿದುಬಂದಿಲ್ಲ.15 ವ್ಯಕ್ತಿಗಳನ್ನು ಮಾದಕವಸ್ತು ಮಾರಾಟ, ವಿತರಣೆ ಮತ್ತು ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ.
ಅವರಲ್ಲಿ 13 ಜನರನ್ನು ಕ್ಯಾನಾಬೀಸ್, ಮರಿಜುವಾನಾ ಮತ್ತು ಎಕ್ಸ್ಟಸಿ ಸೇವನೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದೆ.195 ಯುವಕರಲ್ಲಿ 176 ಪುರುಷರು ಮಾದಕವಸ್ತು ಸೇವಿಸಿದ್ದರೆ ಮೋಜಿನಕೂಟದಲ್ಲಿ ಹಾಜರಿದ್ದ ಎಲ್ಲ 36 ಯುವತಿಯರು ಮಾದಕವಸ್ತು ಸೇವಿಸಿರುವುದು ಪತ್ತೆಯಾಗಿದೆ. ಸುಮಾರು 90 ಯುವಕರು ಶರಣಾಗಿದ್ದು, ಉಳಿದವರನ್ನು ಕೂಡಲೇ ಬಂಧಿಸಲಾಗುವುದು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|