|
| ಮಹಿಳೆಗೆ ಎಚ್‌ಐವಿ ಚುಚ್ಚುಮದ್ದು ನೀಡಿದ ಪ್ರೇಮಿ |
| ಗುಂಟೂರು, 5 ಜನವರಿ 2009 ( 11:20 IST ) | |
ಲೈಂಗಿಕಾಪೇಕ್ಷೆಯನ್ನು ತಿರಸ್ಕರಿಸಿದ ಇಬ್ಬರು ಮಹಿಳೆಯರಿಗೆ ಎಚ್‌ಐವಿ ಸೋಂಕಿತ ರಕ್ತದ ಚುಚ್ಚುಮದ್ದನ್ನು ನೀಡಿದ ವಿಕೃತ ಹಿಂಸಾಚಾರದ ಒಂದೇ ರೀತಿಯ ಎರಡು ವಿಲಕ್ಷಣ ಪ್ರಕರಣಗಳು ಗುಂಟೂರಿನಲ್ಲಿ ಕಳೆದ ವಾರ ನಡೆದಿವೆ. ಮಾನಸಿಕವಾಗಿ ಜರ್ಜರಿತರಾದ ಪ್ರೇಮಿಗಳು ಸೇಡು ತೀರಿಸಿಕೊಳ್ಳಲು ಇದೊಂದು ಹೊಸ ವಿಧಾನವನ್ನು ಬಳಸುತ್ತಿರುವ ಬಗ್ಗೆ ಪೊಲೀಸರೀಗ ಕಳವಳಕ್ಕೆ ಈಡಾಗಿದ್ದಾರೆ.
ಚುಚ್ಚುಮದ್ದು ನೀಡಿದ 2 ಗಂಟೆಗಳಲ್ಲಿ ಆಸ್ಪತ್ರೆಗೆ ಸೇರಿಸಿದರೆ ಈ ದುರ್ದೈವಿಗಳ ಜೀವವುಳಿಸಬಹುದು ಎಂದು ವೈದ್ಯರು ತಿಳಿಸಿದ್ದರೂ ಯಾವ ಮಹಿಳೆಗೂ ಸಕಾಲದಲ್ಲಿ ವೈದ್ಯಕೀಯ ನೆರವು ಸಿಕ್ಕಿಲ್ಲ.ಎರಡೂ ಘಟನೆಗಳಲ್ಲಿ ಆರೋಪಿಗಳು ಮಹಿಳೆಯರ ಹತ್ತಿರದ ಸಂಬಂಧಿಗಳೆಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಗುಂಟೂರು ಪಟ್ಟಣದ ದೇವ ಪ್ರಭಾಕರ್ ತನ್ನ ನಾದಿನಿ ವಿವಾಹಕ್ಕೆ ಒಪ್ಪದಿದ್ದಾಗ ಎಚ್‌ಐವಿ ರೋಗಿಯೊಬ್ಬನ ನೆರವಿನಿಂದ ನಾದಿನಿಯ ದೇಹಕ್ಕೆ ಸೋಂಕುಪೀಡಿತ ರಕ್ತದ ಚುಚ್ಚುಮದ್ದು ನೀಡಿದನೆಂದು ವರದಿಯಾಗಿದೆ.
6 ವರ್ಷಗಳ ಕೆಳಗೆ ನಾದಿನಿಯ ಅಕ್ಕನ ಜತೆ ಪ್ರಭಾಕರ್ ವಿವಾಹವಾಗಿದ್ದರೂ ಆಕೆಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ. ಫೋಷಕರು ಎಚ್ಚರಿಕೆ ನೀಡಿದ್ದರಿಂದ ಆತನ ಜತೆ ಸಂಬಂಧ ಕಡಿದುಕೊಂಡಿದ್ದಳು. ಮದುವೆಗೆ ಅವನು ಒತ್ತಾಯಿಸಿದಾಗ ಆಕೆ ಪೊಲೀಸರಿಗೆ ದೂರು ನೀಡಿದಳೆಂದು ತಿಳಿದುಬಂದಿದೆ.
ಪೊಲೀಸರು ಅವನನ್ನು ಬಂಧಿಸಿ ಜೈಲಿಗೆ ತಳ್ಳಿದ್ದರಿಂದ ಜೈಲಿನಿಂದ ಹೊರಬಂದ ಬಳಿಕ ಸೇಡುತೀರಿಸಿಕೊಳ್ಳಲು ಈ ಕೃತ್ಯವೆಸಗಿದನೆಂದು ಹೇಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಚೌಧರಿ ಚಿನ್ನಾ ಎಂಬವ ತನ್ನ ಪತ್ನಿ ಜತೆಯಲ್ಲಿ ವಾಸಕ್ಕೆ ನಿರಾಕರಿಸಿದಾಗ ಆಕೆಯ ದೇಹಕ್ಕೆ ಎಚ್‌ಐವಿ ಚುಚ್ಚುಮದ್ದು ನೀಡಿದನೆಂದು ತಿಳಿದುಬಂದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|