ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ತೀವ್ರಗೊಂಡ ಚಳಿಗಾಳಿ, ಮತ್ತೆ 15 ಮಂದಿ ಸಾವು
ನವದೆಹಲಿ, 5 ಜನವರಿ 2009   ( 09:39 IST )
ಹಿಮವರ್ಷದೊಂದಿಗೆ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಚಳಿ ಗಾಳಿ ಪರಿಸ್ಥಿತಿ ತೀವ್ರಗೊಂಡಿದ್ದು, ಮತ್ತೆ 15 ಮಂದಿ ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಯಿತು ಮತ್ತು ದಟ್ಟ ಮಂಜಿನ ಕಾರಣ ರಸ್ತೆ, ವಿಮಾನ ಮತ್ತು ರೈಲು ಸಂಚಾರ ಅಡಚಣೆಗೊಳಗಾಯಿತು.

ಉತ್ತರ ಪ್ರದೇಶದಲ್ಲಿ ಮೈಕೊರೆಯುವ ಚಳಿಯಿಂದಾಗಿ 12 ಮಂದಿ ಸಾವಿಗೀಡಾಗಿದ್ದರೆ, ಜಮ್ಮು ಕಾಶ್ಮೀರದಲ್ಲಿ ಮೂವರು ಮಂದಿ ಪ್ರಾಣ ಕಳೆಯುವುದರೊಂದಿಗೆ ಒಟ್ಟು ಸತ್ತವರ ಸಂಖ್ಯೆ 46ಕ್ಕೆ ಏರಿದೆ.

ಕಾನ್ಪುರದಲ್ಲಿ ಕೆಟ್ಟ ಗೋಚರತೆಯ ಕಾರಣ ನಿಂತಿದ್ದ ರೈಲಿಗೆ ಸರಕು ಸಾಗಣೆ ರೈಲೊಂದು ಡಿಕ್ಕಿ ಹೊಡೆದಿದ್ದು, ಓರ್ವ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ದುರ್ಘಟನೆಯ ಹಿನ್ನೆಲೆಯಲ್ಲಿ ದಿಲ್ಲಿ-ಹೌವಾರ ಮಾರ್ಗದಲ್ಲಿ ರೈಲು ಸಂಚಾರ ಅಸ್ಥವ್ಯಸ್ಥಗೊಂಡಿತು.

ಕಳೆದ ಸಂಜೆ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಮೇಲಿನ ಬಾಲ್ಟಾಲ್ ಮತ್ತು ದ್ರಾಸ್ ಸೇರಿದಂತೆ ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶದಲ್ಲಿ ಸುಮಾರು ಒಂದು ವರೆ ಅಡಿ ಹಿಮ ಪಾತ ದಾಖಲಾಗಿದೆ. ಜಮ್ಮುವಿನ ಗಾಂಧಿ ನಗರ, ಗಂಗ್ಯಾಲ್ ಮತ್ತು ಭಾರತ್ ಪ್ರದೇಶಗಳಲ್ಲಿ ತೀವ್ರ ಚಳಿಯಿಂದಾಗಿ ಮೂವರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗಟ್ಟಿಯಾದ ಖಾತರಿಗಳನ್ನು ಪಾಕ್ ನೀಡಬೇಕು: ಚಿದಂಬರಂ
ಪೂಂಚ್‌ನಲ್ಲಿ ಭೀಕರ ಗುಂಡಿನ ಕಾಳಗ
ಭಯೋತ್ಪಾದಕ ಅಡಗುತಾಣ ನಾಶಕ್ಕೆ ಕಲಾಂ ಕರೆ
ಭಯೋತ್ಪಾದನೆ: ಅಮೆರಿಕಕ್ಕೆ ಚಿದಂಬರಂ ಭೇಟಿ
ಬಿಎಸ್‌ಪಿ ಶಾಸಕ ತಿವಾರಿ ವಿರುದ್ಧ ಆರೋಪಪಟ್ಟಿ
ಮಣಿಪುರ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...