|
| ಪೂಂಚ್‌ನಲ್ಲಿ ಭೀಕರ ಗುಂಡಿನ ಕಾಳಗ |
| ಪೂಂಚ್, ಭಾನುವಾರ, 4 ಜನವರಿ 2009 ( 11:51 IST ) | |
ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಭಾಗದ ದಟ್ಟವಾದ ಪರ್ವತಮಯ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತ್ಯೇಕತಾವಾದಿ ಉಗ್ರಗಾಮಿಗಳ ನಡುವೆ ಭೀಕರ ಗುಂಡಿನಚಕಮಕಿಯು ನಡೆದಿದೆ. ಸುಮಾರು 60 ಗಂಟೆಗಳ ಕಾಲದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರಗಾಮಿಗಳು ಮತ್ತು ಮೂವರು ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ.
ಕಟ್ಟಾ ಉಗ್ರಗಾಮಿಗಳು ಅಡಗುತಾಣಗಳಲ್ಲಿ ಉಪಸ್ಥಿತರಿದ್ದಾರೆಂಬ ಸುಳಿವನ್ನಾಧರಿಸಿ ಪೂಂಚ್‌ನ ಮೆಂಧಾರ್ ಬಳಿ ಪಾಟಿ ಟಾರ್ ಪರ್ವತಮಯ ಅರಣ್ಯಕ್ಕೆ ಸೇನೆ ಮುತ್ತಿಗೆ ಹಾಕಿತು. ಜೈಷೆ ಮೊಹಮ್ಮದ್ ಮತ್ತು ಲಷ್ಕರೆ ತೊಯ್ಬಾ ಸಂಘಟನೆಗಳ ಉನ್ನತ ಕಮಾಂಡರ್‌ಗಳು ಅಡಗುತಾಣಗಳಲ್ಲಿದ್ದಾರೆಂದು ವರದಿಯಾಗಿತ್ತು. ಮುತ್ತಿಗೆ ಸಂದರ್ಭದಲ್ಲಿ ಭಾರೀ ಗುಂಡಿನ ದಾಳಿಗೆ ಸೇನೆಯ ಇಬ್ಬರು ಸೈನಿಕರು ಹತರಾದರು.
ಪಡೆಗಳು ನಾಲ್ವರು ಉಗ್ರರನ್ನು ಕೊಂದಿದ್ದು, ಅವರ ದೇಹಗಳು ಪತ್ತೆಯಾಗಿಲ್ಲ ಎಂದು ಉಧಾಂಪುರ ಉತ್ತರ ಕಮಾಂಡ್‌ನ ವಕ್ತಾರ ಕರ್ನಲ್ ಡಿ.ಕೆ. ಕಚಾರಿ ತಿಳಿಸಿದರು. ಮುಂದುವರಿದ ಕದನದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ನೆರವಾಗುವ ತಾತ್ಕಾಲಿಕ ಸಿಬ್ಬಂದಿ ನರೇಶ್‌ಕುಮಾರ್ ಶನಿವಾರ ಹತರಾಗಿದ್ದಾರೆ.
ಹಿರಿಯ ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ನಿಗಾಕ್ಕೆ ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಅವರು ವಿವಿಧ ಕಡೆಗಳಿಂದ ಗುಂಡು ಹಾರಿಸುತ್ತಿರುವುದರಿಂದ ಅಲ್ಲಿ ಉಪಸ್ಥಿತರಿರುವ ಉಗ್ರಗಾಮಿಗಳ ಸಂಖ್ಯೆ ಬಗ್ಗೆ ನಮಗೆ ಅರಿವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|