|
| ಭಯೋತ್ಪಾದಕ ಅಡಗುತಾಣ ನಾಶಕ್ಕೆ ಕಲಾಂ ಕರೆ |
| ಹಮೀರ್‌ಪುರ್, 4 ಜನವರಿ 2009 ( 11:46 IST ) | |
ರಾಷ್ಟ್ರದ ಒಳಗೆ ಮತ್ತು ಹೊರಗೆ ಉಗ್ರಗಾಮಿಗಳ ಅಡಗುತಾಣಗಳ ಮೇಲೆ ದಾಳಿ ಮತ್ತು ನಾಶಮಾಡುವುದು ಸೇರಿದಂತೆ ಮೂರು ಹಂತದ ಕಾರ್ಯತಂತ್ರವನ್ನು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶನಿವಾರ ಸಲಹೆ ಮಾಡಿದ್ದಾರೆ. ಮೊದಲಿಗೆ ಭಯೋತ್ಪಾದನೆ ಪಿಡುಗು ನಿಭಾಯಿಸಲು ಪ್ರತಿಯೊಬ್ಬ ಪೌರನನ್ನು ಒಳಗೊಂಡ ವ್ಯಾಪಕ ರಾಷ್ಟ್ರೀಯ ಆಂದೋಳನ ರೂಪಿಸಬೇಕು ಎಂದು ವಿದ್ಯಾರ್ಥಿಗಳ ಜತೆ ಸಮಾಲೋಚಿಸುತ್ತಾ ಅವರು ಹೇಳಿದರು.
ಎರಡನೆಯದಾಗಿ, ರಾಷ್ಟ್ರದ ಒಳಗೆ ಮತ್ತು ಹೊರಗೆ ಭಯೋತ್ಪಾದನೆ ಅಡಗುತಾಣಗಳ ನಾಶಕ್ಕೆ ದಾಳಿಗಳನ್ನು ಮಾಡಬೇಕೆಂದು ಕಲಾಂ ಸಲಹೆ ಮಾಡಿದರು. ಕೊನೆಯದಾಗಿ ಇಂತಹ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆ ಅಗತ್ಯವಿದೆ ಎಂದು ಅವರು ನುಡಿದರು.
'ಕ್ಷಿಪಣಿ ಮಾನವ' ರಾಷ್ಟ್ರದಲ್ಲಿ ಭಯೋತ್ಪಾದನೆ ಘಟನೆಗಳ ಹೆಚ್ಚಳ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿ, ರಾಷ್ಟ್ರಕ್ಕೆ ಇದು ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದರು. ಹಮೀರ್‌ಪುರದಲ್ಲಿ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಮಾಜಿ ರಾಷ್ಟ್ರಪತಿಗಳನ್ನು ಭಯೋತ್ಪಾದನೆ ಪಿಡುಗಿನಿಂದ ಹಿಡಿದು ಅವರ ವೈಯಕ್ತಿಕ ಜೀವನದ ಹಲವಾರು ಪ್ರಶ್ನೆಗಳಿಗೆ ಕಲಾಂ ಉತ್ತರಿಸುತ್ತಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|