|
| ಬಿಎಸ್‌ಪಿ ಶಾಸಕ ತಿವಾರಿ ವಿರುದ್ಧ ಆರೋಪಪಟ್ಟಿ |
| ಲಕ್ನೊ, ಶನಿವಾರ, 3 ಜನವರಿ 2009 ( 16:25 IST ) | |
ಉತ್ತರಪ್ರದೇಶ ಪೊಲೀಸರು ಶನಿವಾರ ಪಿಡಬ್ಲ್ಯುಡಿ ಎಂಜಿನಿಯರ್ ಹತ್ಯೆಗೆ ಸಂಬಂಧಿಸಿದಂತೆ ಬಿಎಸ್‌ಪಿ ಶಾಸಕ ಶೇಖರ್ ತಿವಾರಿ ಮತ್ತು ಇನ್ನೂ 9 ಮಂದಿ ಆರೋಪಿಗಳ ವಿರುದ್ಧ ಶನಿವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಬಿಎಸ್‌ಪಿ ಶಾಸಕ ಶೇಖರ್ ತಿವಾರಿ ಸೇರಿದಂತೆ 10 ಆರೋಪಿಗಳ ವಿರುದ್ಧ ಮನೋಜ್ ಗುಪ್ತಾ ಹತ್ಯೆಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ.
10 ಆರೋಪಿಗಳಲ್ಲಿ ತಿವಾರಿ ಸೇರಿದಂತೆ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸ್ ಪ್ರಧಾನನಿರ್ದೇಶಕ ವಿಕ್ರಂ ಸಿಂಗ್ ವರದಿಗಾರರಿಗೆ ತಿಳಿಸಿದರು. ಹತ್ಯೆಗೊಳಗಾದ ಮನೋಜ್ ಗುಪ್ತಾ ನಿವಾಸದಿಂದ ವಿಧಿವಿಜ್ಞಾನ ಮತ್ತು ದಾಖಲೆಯ ಸಾಕ್ಷ್ಯವನ್ನು ಪತ್ತೆಹಚ್ಚಿರುವುದಾಗಿ ಡಿಜಿಪಿ ವಿಕ್ರಂ ಸಿಂಗ್ ತಿಳಿಸಿದರು.
ಆ ದುರ್ದಿನದ ಘಟನೆಯನ್ನು ವಿವರಿಸಿದ ಸಿಂಗ್, ವಿದ್ಯುತ್ ಶಾಕ್ ನೀಡಲು ಬಳಸಲಾದ ವೈರ್, ಮೃತರಿಗೆ ಮಾರಣಾಂತಿಕ ಹಲ್ಲೆ ಮಾಡಲು ಬಳಸಲಾದ ದೊಣ್ಣೆ ಮತ್ತು ರಕ್ತಲೇಪಿತ ಬಟ್ಟೆಯ ತುಂಡು ಪತ್ತೆಯಾಗಿವೆ. ಹತ್ಯೆಗೆ ಬಳಸಲಾದ ನಾಲ್ಕು ಕಾರುಗಳನ್ನು ಕೂಡ ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|