|
| ಮಣಿಪುರ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ |
| ನವದೆಹಲಿ, ಶನಿವಾರ, 3 ಜನವರಿ 2009 ( 16:07 IST ) | |
ಮಣಿಪುರದ ಪೂರ್ವ ಇಂಫಾಲ್ ಮತ್ತು ಬಿಶೆನ್‌ಪುರ ಜಿಲ್ಲೆಗಳಲ್ಲಿ ಭದ್ರತಾಪಡೆಗಳ ಜತೆ ಪ್ರತ್ಯೇಕ ಚಕಮಕಿಗಳಲ್ಲಿ ನಾಲ್ವರು ಉಗ್ರಗಾಮಿಗಳು ಹತರಾಗಿದ್ದಾರೆಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಕೆಲವು ಉಗ್ರಗಾಮಿಗಳ ಚಲನವಲನದ ವರದಿ ಹಿನ್ನೆಲೆಯಲ್ಲಿ ಪೂರ್ವ ಇಂಫಾಲ್ ಜಿಲ್ಲೆಯ ಸಂಜೆನ್‌ಬಾಂ ಗ್ರಾಮದ ಮೇಲೆ ಪೊಲೀಸ್ ಕಮಾಂಡೊಗಳು ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡ ದಾಳಿ ಮಾಡಿತೆಂದು ಮೂಲಗಳು ಹೇಳಿವೆ.
ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ, ಉಗ್ರಗಾಮಿಗಳು ಪಡೆಗಳ ಮೇಲೆ ಗುಂಡು ಹಾರಿಸಿದರು ಮತ್ತು ಚಕಮಕಿಯಲ್ಲಿ ಗುರುತುಸಿಗದ ಉಗ್ರಗಾಮಿ ಹತನಾಗಿದ್ದು, ಇನ್ನೂ ಕೆಲವರು ತಲೆತಪ್ಪಿಸಿಕೊಂಡಿದ್ದಾರೆ. ಮೃತನಿಂದ ಒಂದು ಸಣ್ಣ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಬಿಶೇನ್‌ಪುರದ ಪೋಟ್ಸ್‌ಸಂಗ್‌ಬಾಂನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಭದ್ರತಾಸಿಬ್ಬಂದಿ ಜತೆ ಗುಂಡಿನಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಒಂದು 9 ಎಂಎಂ ಪಿಸ್ತೂಲು, ಕೆಲವು ಸುತ್ತು ಮದ್ದುಗುಂಡುಗಳು ಮತ್ತು ಎರಡು ಗ್ರೆನೇಡ್‌ಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|