ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಮುಂಬೈ ದಾಳಿ: ಅಮೆರಿಕದಿಂದ 2 ಬಾರಿ ಎಚ್ಚರಿಕೆ- ವರದಿ
ವಾಷಿಂಗ್ಟನ್, ಮಂಗಳವಾರ, 2 ಡಿಸೆಂಬರ್ 2008   ( 15:22 IST )
ಮುಂಬೈ ದಾಳಿಯ ಕನಿಷ್ಠ ಒಂದು ತಿಂಗಳ ಮುಂಚೆಯೇ ಅಮೆರಿಕ ಗುಪ್ತಚರ ಇಲಾಖೆ ಸಂಭಾವ್ಯ ಕಡಲತಡಿ ದಾಳಿಯ ಬಗ್ಗೆ ಭಾರತಕ್ಕೆ ಎರಡು ಬಾರಿ ಎಚ್ಚರಿಕೆ ನೀಡಿತ್ತು ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಈ ಬಗ್ಗೆ ಅಮೆರಿಕದ ಭಯೋತ್ಪಾದನೆ ವಿರೋಧಿ ಅಧಿಕಾರಿಯೊಬ್ಬರ ಉಲ್ಲೇಖ ಸಿಎನ್ಎನ್‌ನಲ್ಲಿ ವರದಿಯಾಗಿದೆ. ಈ ಎಚ್ಚರಿಕೆಯನ್ನು ಒಂದು ಸಾರಿಯಲ್ಲ ಎರಡು ಬಾರಿ ಭಾರತ ಸರಕಾರಕ್ಕೆ ನೀಡಲಾಗಿದೆ ಎಂಬ ಅಧಿಕಾರಿಯ ಉಲ್ಲೇಖವನ್ನು ಸಿಎನ್ಎನ್ ಪ್ರಸಾರ ಮಾಡಿದೆ.

ತಾಜ್ ಹೋಟೆಲ್ ಸೇರಿದಂತೆ ನಿರ್ದಿಷ್ಟ ತಾಣಗಳು ಅಮೆರಿಕದ ಎಚ್ಚರಿಕೆ ಪಟ್ಟಿಯಲ್ಲಿತ್ತು ಎಂಬುದನ್ನು ಎಬಿಸಿನ್ಯುವ್ಸ್.ಕಾಂ‌ಗೆ ಸರಕಾರಿ ಮೂಲಗಳು ತಿಳಿಸಿವೆ.

ಉಗ್ರರ ಗುಂಪೊಂದು ಜಲದ ಮುಖಾಂತರ ದೇಶದೊಳಕ್ಕೆ ಪ್ರವೇಶಿಸಿ, ಮುಂಬೈ ಮೇಲೆ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆ ಸೂಚನೆ ನೀಡಿತ್ತು ಎಂಬುದಾಗಿ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸಿಎನ್ಎನ್ ಹೇಳಿದೆ.

ಅಮೆರಿಕ ಅಧಿಕಾರಿಗಳು ಮುಂಬೈ ಮೇಲಿನ ದಾಳಿ ಬಗ್ಗೆ ಒಂದು ಸಾರಿ ಅಲ್ಲ ಎರಡು ಬಾರಿ ಎಚ್ಚರಿಕೆ ನೀಡಿರುವುದಾಗಿ ಭಾರತೀಯ ಭದ್ರತಾ ಪಡೆಗಳು ಸಿಎನ್ಎನ್‌‌ನಲ್ಲಿ ದೃಢಪಡಿಸಿದ್ದಾರೆ. ಒಂದು ವಾರಗಳ ಕಾಲ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು ಆದರೆ ಅಂತಿಮವಾಗಿ ಆ ಶ್ರಮಗಳನ್ನು ಕಡಿತಗೊಳಿಸಲಾಯಿತು ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಸಿಎನ್ಎನ್ ಹೇಳಿದೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಾರತ ಪಾಕ್ ಪ್ರತಿಕ್ರಿಯೆಗೆ ಎದುರು ನೋಡುತ್ತಿದೆ: ಪ್ರಣಬ್
ಅಸ್ಸಾಂ ರೈಲು ಸ್ಫೋಟ: ಕನಿಷ್ಠ 3 ಸಾವು, 30 ಗಾಯ
ಸಹಜ ಸ್ಥಿತಿಯತ್ತ ಮುಂಬೈ ನಗರ
ಟಾಟಾ ಸಮೂಹದ ಸುಪರ್ದಿಗೆ ತಾಜ್ ಹೊಟೆಲ್
ರಿಸ್ವಾನ್ ಪ್ರಕರಣ: ಅಶೋಕ್ ಟೋಡಿ ನ್ಯಾಯಾಂಗ ಕಸ್ಟಡಿಗೆ
ಪಕ್ಷ ಉಗ್ರವಾದವನ್ನು ರಾಜಕೀಯಗೊಳಿಸುತ್ತಿಲ್ಲ: ಸಿಂಗ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...