ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ರಿಸ್ವಾನ್ ಪ್ರಕರಣ: ಅಶೋಕ್ ಟೋಡಿ ನ್ಯಾಯಾಂಗ ಕಸ್ಟಡಿಗೆ
ಕೋಲ್ಕತಾ, ಸೋಮವಾರ, 1 ಡಿಸೆಂಬರ್ 2008   ( 16:15 IST )
ರಿಸ್ವಾನುರ್ ರೆಹಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಶೋಕ್ ಟೋಡಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನಗರದ ನ್ಯಾಯಾಲಯವೊಂದರ ಎದುರು ಹಾಜರಾಗಿದ್ದು, ಅವರನ್ನು ಡಿಸೆಂಬರ್ 12ರ ತನಕ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

ಕೆಲ ಸಮಯದಿಂದ ತಲೆ ತಪ್ಪಿಸಿಕೊಂಡಿದ್ದರೆನ್ನಲಾದ ಟೋಡಿ ಬ್ಯಾಂಕ್‌ಶಲ್ ನ್ಯಾಯಾಲಯದ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಹೊರಡಿಸಿದ ಬಂಧನ ವಾರಂಟ್‌ನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದನು. ಆದರೆ ಅಪೆಕ್ಸ್ ಕೋರ್ಟ್ ಆತನಿಗೆ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಲು ನಿರ್ದೇಶನ ನೀಡಿತ್ತು.

ತಮ್ಮ ಕಕ್ಷಿದಾರರು ಅನಾರೋಗ್ಯ ಪೀಡಿತರಾಗಿದ್ದು, ಅವರನ್ನು ರಿಸ್ವಾನುರ್ ಎಲ್ಲಾ ಆರೋಪಗಳಿಂದ ವಿಮುಕ್ತಿಗೊಳಿಸಿದ್ದರು ಎಂಬುದಾಗಿ ವಾದಿಸಿದ ಟೋಡಿಯ ವಕೀಲ ಪ್ರದೀಪ್ ಘೋಶ್ ಮ್ಯಾಜಿಸ್ಟ್ರೇಟ್ ಎದುರು ಜಾಮೀನು ಕೋರಿಕೆ ಸಲ್ಲಿಸಿದರು.

ಸಿಬಿಐ ವಕೀಲ ಪಾರ್ಥ ತಪಸ್ವಿ ಈ ಜಾಮೀನು ಅರ್ಜಿಯನ್ನು ವಿರೋಧಿಸುತ್ತಾ, ಟೋಡಿ ಪ್ರಮುಖ ಆರೋಪಿಯಾಗಿದ್ದು, ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಕ್ಷ ಉಗ್ರವಾದವನ್ನು ರಾಜಕೀಯಗೊಳಿಸುತ್ತಿಲ್ಲ: ಸಿಂಗ್
ಉಗ್ರರು ಪಾಕ್‌ನವರೆಂಬುದಕ್ಕೆ ಸಾಕ್ಷಿ ಇದೆ: ಬಿಎಸ್ಎಫ್
ರಾಜಿನಾಮೆ ನೀಡಲು ಹೇಳಲಾಗಿದೆ: ದೇಶ್‌ಮುಖ್
ಮುಂಬೈ ದಾಳಿ: ಮಹರಾಷ್ಟ್ರ ಉಪಮುಖ್ಯಮಂತ್ರಿ ರಾಜಿನಾಮೆ
ಉಗ್ರರ ವಿರುದ್ಧ ಪೆಡರರ್ ಏಜೆನ್ಸಿ: ಪ್ರಧಾನಿ ಒಲವು
ಮುಂಬೈ ದಾಳಿ: ಶಿವರಾಜ್ ಪಾಟಿಲ್ ರಾಜಿನಾಮೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...