ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ರಾಜಿನಾಮೆ ನೀಡಲು ಹೇಳಲಾಗಿದೆ: ದೇಶ್‌ಮುಖ್
ನವದೆಹಲಿ, 1 ಡಿಸೆಂಬರ್ 2008   ( 12:55 IST )
ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಗೃಹ ಸಚಿವ ಶಿವರಾಜ್ ಪಾಟಿಲ್, ಮಹರಾಷ್ಟ್ರ ಉಪ ಮುಖ್ಯಮಂತ್ರಿ ಆರ್ ಆರ್ ಪಾಟಿಲ್ ತಮ್ಮ ರಾಜಿನಾಮೆ ನೀಡಿದ ಬಳಿಕ ಈಗ ಅದೇ ನಿರ್ಗಮನ ಧ್ವಾರದಲ್ಲಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಇದ್ದಾರೆ.

ಉಗ್ರರ ದಾಳಿ ಹಿನ್ನೆಲೆಯಲ್ಲಿ ತನಗೆ ಮುಖ್ಯಮಂತ್ರಿ ಸ್ಥಾನ ತೊರೆಯುವಂತೆ ಹೇಳಲಾಗಿದೆ ಎಂದು ವಿಲಾಸ್‌ರಾವಿ ದೇಶ್‌ಮುಖ್ ತಿಳಿಸಿದ್ದಾರೆ. ಮಾಧ್ಯಮದವರಲ್ಲಿ ಮಾತನಾಡುತ್ತಾ ಅವರು, ತನಗೆ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮುಖ್ಯಮಂತ್ರಿ ಸ್ಥಾನ ತೊರೆಯಲು ಹೇಳಲಾಗಿದೆ ಎಂದು ಹೇಳಿದ್ದು, ಈ ನಿಟ್ಟಿನಲ್ಲಿ ಇನ್ನೂ ಹೈ ಕಮಾಂಡ್ ಅಂತಿಮ ನಿರ್ಧಾರ ತೆಗೆದು ಕೊಂಡಿಲ್ಲ ಎಂದು ವಿವರಿಸಿದ್ದಾರೆ.

ಈ ಸುದ್ಧಿಯನ್ನು ದೃಢಪಡಿಸಿದ ರಕ್ಷಣಾ ಸಚಿವ ಎಕೆ ಆಂಟನಿ, ಈ ವಿಷಯವಾಗಿ ಸಮಾಲೋಚನೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೆ ನಿರ್ಧಾರವೊಂದಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿನ ನಿರ್ಧಾರವನ್ನು ನಾಳೆಯೊಳಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಉಗ್ರರ ದಾಳಿಯ ಮೂರು ದಿನಗಳ ಬಳಿಕ ಉಪಮುಖ್ಯಮಂತ್ರಿ ಆರ್ ಆರ್ ಪಾಟಿಲ್ ತಮ್ಮ ರಾಜಿನಾಮೆಯನ್ನು ನೀಡಿದ್ದಾರೆ. ಪಕ್ಷದ ಅಧ್ಯಕ್ಷ ಶರದ್ ಪವಾರ್ ಮುಖ್ಯಮಂತ್ರಿಯವರಲ್ಲಿ ಅವರ ರಾಜಿನಾಮೆಯನ್ನು ಸ್ವೀಕರಿಸುವಂತೆ ಕೋರಿದ್ದರು.

ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹಾಗೂ ದೇಶ್‌ಮುಖ್‌ರ ಪುತ್ರ ರಿತೇಶ್‌ರ ಜತೆಗೂಡಿ ದಾಳಿಗೊಳಗಾದ ತಾಜ್ ಹೋಟೆಲ್ ಭೇಟಿ ನೀಡಿದ್ದರಿಂದ ಈಗಾಗಲೇ ಟೀಕೆಗೊಳಗಾಗಿರುವ ಮುಖ್ಯಮಂತ್ರಿ ದೇಶ್‌ಮುಖ್ ಈಗ ತಾಜಾ ವಿವಾದಕ್ಕೆ ಒಳಗಾಗಿದ್ದಾರೆ.

ಪ್ರಧಾನಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು. ಲಘು ಮನೋವೃತ್ತಿ ತೋರಿದ್ದಕ್ಕಾಗಿ ಇತರ ಪಕ್ಷಗಳು ಸಿಎಂರನ್ನು ತರಾಟೆಗೆ ತೆಗೆದುಕೊಂಡಿದ್ದವು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂಬೈ ದಾಳಿ: ಮಹರಾಷ್ಟ್ರ ಉಪಮುಖ್ಯಮಂತ್ರಿ ರಾಜಿನಾಮೆ
ಉಗ್ರರ ವಿರುದ್ಧ ಪೆಡರರ್ ಏಜೆನ್ಸಿ: ಪ್ರಧಾನಿ ಒಲವು
ಮುಂಬೈ ದಾಳಿ: ಶಿವರಾಜ್ ಪಾಟಿಲ್ ರಾಜಿನಾಮೆ
ಮುಂಬೈ ಸ್ಥಳೀಯರು ನೆರವು ನೀಡಿದರು: ಬಂಧಿತ ಉಗ್ರ
ಪಿಎಂರಿಂದ ಭದ್ರತಾ ಸೇವಾ ಮುಖ್ಯಸ್ಥರ ಭೇಟಿ
ಮುಂಬೈ ವೀರ ಯೋಧರಿಗೆ ಅಂತಿಮ ನಮನ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...