|
| ಮುಂಬೈ ದಾಳಿ: ಮಹರಾಷ್ಟ್ರ ಉಪಮುಖ್ಯಮಂತ್ರಿ ರಾಜಿನಾಮೆ |
| ಮುಂಬೈ, ಸೋಮವಾರ, 1 ಡಿಸೆಂಬರ್ 2008 ( 11:42 IST ) | |
ಮುಂಬೈ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರೀ ಟೀಕಾ ಪ್ರಹಾರಕ್ಕೆ ಒಳಗಾಗಿದ್ದ ಮಹರಾಷ್ಟ್ರ ಉಪಮುಖ್ಯಮಂತ್ರಿ ಆರ್ ಆರ್ ಪಾಟಿಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ತಾನು ತನ್ನ ರಾಜಿನಾಮೆ ಪತ್ರವನ್ನು ಮುಖ್ಯ ಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್‌ಗೆ ಸಲ್ಲಿಸಿದ್ದು, ತನ್ನ ಆತ್ಮಸಾಕ್ಷಿಯಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಪಾಟಿಲ್ ತಿಳಿಸಿದ್ದಾರೆ.
ಮುಂಬೈ ದಾಳಿ ಹಿನ್ನೆಲೆಯಲ್ಲಿನ ತನ್ನ ಮೇಲೆ ವ್ಯಕ್ತವಾಗಿರುವ ಟೀಕೆಯ ವಿಷಯವಾಗಿ ತಾನು ನಿನ್ನೆ ರಾತ್ರಿ ಇಡೀ ಯೋಚಿಸಿ, ಅಂತಿಮವಾಗಿ ರಾಜಿನಾಮೆ ನೀಡಲು ತಾನು ನಿರ್ಧರಿಸಿದೆ ಎಂದು ಅವರು ವಿವರಿಸಿದರು.
ಈ ಮೂಲಕ ಮುಂಬೈ ಉಗ್ರರ ದಾಳಿಯ ವಿಚಾರವಾಗಿ ರಾಜಿನಾಮೆ ಸಲ್ಲಿಸಿದವರಲ್ಲಿ ಆರ್ ಆರ್ ಪಾಟಿಲ್ ಎರಡನೇಯವರಾಗಿದ್ದಾರೆ. ಇದಕ್ಕೂ ಮುಂಚೆ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟಿಲ್ ನಿನ್ನೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.
ರಾಜ್ಯ ಗೃಹ ಸಚಿವಲಾಯದ ಹೊಣೆಯನ್ನೂ ಹೊತ್ತಿರುವ ಆರ್ ಆರ್ ಪಾಟಿಲ್, ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರೀ ಟೀಕಾ ಪ್ರಹಾರಕ್ಕೆ ಒಳಗಾಗಿದ್ದರು. ಆರ್ ಆರ್ ಪಾಟಿಲ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬುದಾಗಿ ಆರೋಪಿಸಿ ಪ್ರತಿಪಕ್ಷಗಳಾದ ಶಿವಸೇನೆ ಹಾಗೂ ಬಿಜೆಪಿ ಅವರ ರಾಜಿನಾಮೆಗೆ ಆಗ್ರಹಿಸಿದ್ದವು.
ಶರತ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷದವರಾಗಿರುವ ಪಾಟಿಲ್ ಪಶ್ಚಿಮ ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯವರಾಗಿದ್ದಾರೆ. ಆರ್ ಆರ್ ಪಾಟಿಲ್‌ರ ರಾಜಿನಾಮೆಯನ್ನು ಸ್ವೀಕರಿಸುವಂತೆ ಶರದ್ ಪವಾರ್ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್‌ರಲ್ಲಿ ಕೋರಿದ್ದರು.
ಉಗ್ರರ ದಾಳಿಯ ನಂತರ ಪಾಟಿಲ್ ವ್ಯಾಕುಲಗೊಂಡಿದ್ದು, ಮೂರು ದಿನಗಳ ಹಿಂದೆ ತಮ್ಮ ಹುದ್ದೆಯಿಂದ ಕೆಳಗಿಳಿಯುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು ಎಂಬುದಾಗಿ ಶರದ್ ಪವಾರ್ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|