|
| ಉಗ್ರರ ವಿರುದ್ಧ ಪೆಡರರ್ ಏಜೆನ್ಸಿ: ಪ್ರಧಾನಿ ಒಲವು |
| ನವದೆಹಲಿ, ಸೋಮವಾರ, 1 ಡಿಸೆಂಬರ್ 2008 ( 10:11 IST ) | |
ಮುಂಬೈ ಉಗ್ರರ ದಾಳಿಯಿಂದ ಭಾರೀ ಟೀಕೆಗೊಳಗಾಗಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಭಯೋತ್ಪಾದನೆ ನಿಗ್ರಹಕ್ಕಾಗಿ ಕಾನೂನು ಚೌಕಟ್ಟುಗಳನ್ನು ಬಲಪಡಿಸುವ ಹಾಗೂ ಪೆಡರಲ್ ತನಿಖಾ ಏಜೆನ್ಸಿಯನ್ನು ಸ್ಥಾಪಿಸುವ ಬಗ್ಗೆ ಘೋಷಿಸಿದ್ದಾರೆ.
ಮುಂಬೈ ದಾಳಿ ಹಿನ್ನೆಲೆಯಲ್ಲಿ ನಡೆಸಲಾದ 5 ತಾಸುಗಳ ಸುದೀರ್ಘ ಸರ್ವ ಪಕ್ಷಸಭೆಯಲ್ಲಿ ಪ್ರಧಾನಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶ ಒಂದಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ನಿಬಂಧನೆಗಳನ್ನು ಬಲ ಪಡಿಸಲಾಗುವುದು ಎಂದು ತಿಳಿಸಿದರು.
ಒಂದು ಕಾಲಾಘಟ್ಟದೊಳಗೆ ಪೆಡರರ್ ತನಿಖಾ ಏಜೆನ್ಸಿಯನ್ನು ರಚಿಸುವತ್ತ ತಾವು ಮುಂದುವರಿಯಲಿದ್ದೇವೆ ಎಂದು ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಉಪಸ್ಥಿತರಿದ್ದ ರಾಜಕೀಯ ಪಕ್ಷಗಳಿಗೆ ಭರವಸೆ ನೀಡಿದರು.
ಭಯೋತ್ಪಾದನೆ ನಿಗ್ರಹಕ್ಕಾಗಿ ಪೋಟಾ ತರದ ಕಠಿಣ ಕಾನೂನು ತರುವ ಬಗ್ಗೆ ಬಿಜೆಪಿ ಹಾಗೂ ಎಐಡಿಎಂಕೆ ಒತ್ತಾಯಿಸಿದಾಗ ನೂತನ ಗೃಹ ಸಚಿವ ಪಿ ಚಿದಂಬರಂ, ಪ್ರಧಾನಿ ಈಗಾಗಲೇ ಕಾನೂನು ಚೌಕಟ್ಟನ್ನು ಬಲ ಪಡಿಸುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂಬುದಾಗಿ ಪ್ರತಿಕ್ರಿಯೆ ನೀಡಿದರು.
ಇದೇ ವೇಳೆ ಪ್ರಧಾನಿ ವಾಯು ಹಾಗೂ ಕರಾವಳಿ ಭದ್ರತೆಯನ್ನು ಬಲಗೊಳಿಸಲು ಹಾಗೂ ದೇಶದ ವಿವಿಧ ಭಾಗಗಳಲ್ಲಿ 4 ಎನ್ಎಸ್‌ಜಿ ಘಟಕಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು. ಭಯೋತ್ಪಾದಕ ವಿರೋಧಿ ಪಡೆಗಳಾದ ಎನ್ಎಸ್‌ಜಿಯನ್ನು ಶೀಘ್ರದಲ್ಲಿ ಬಲಗೊಳಿಸಲಾಗುವುದು ಹಾಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಮುಂಬೈ ದಾಳಿಯಾಗಿನ ದೇಶದ ಜನತೆಯ ಕೋಪ ಹಾಗೂ ಅಸಮಾಧಾನವನ್ನು ಹಂಚಿಕೊಂಡ ಪ್ರಧಾನಿ ಈ ಸವಾಲನ್ನು ಒಟ್ಟಾಗಿ ನಿಭಾಯಿಸಲು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಪರಿಗಣನೆಯಿಂದ ಮೇಲೇರಬೇಕು ಎಂದು ಕರೆ ನೀಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|