|
| ಮುಂಬೈ ದಾಳಿ: ಶಿವರಾಜ್ ಪಾಟಿಲ್ ರಾಜಿನಾಮೆ |
| ನವದೆಹಲಿ, 30 ನವೆಂಬರ್ 2008 ( 13:10 IST ) | |
ನಿರೀಕ್ಷಿಸಿದಂತೆಯೇ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟಿಲ್ ಮುಂಬೈ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾನುವಾರದಂದು ತಮ್ಮ ರಾಜಿನಾಮೆ ಪತ್ರ ನೀಡಿದ್ದುರ, ಪ್ರಧಾನಿ ಅವರು ರಾಜಿನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ. ಇದೇ ವೇಳೆ ತಮ್ಮ ರಾಜಿನಾಮೆ ಪತ್ರ ನೀಡಿದ್ದ ಎನ್‌ಎಸ್ಎ ಎಂಕೆ ನಾರಾಯಣನ್‌ಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಹೇಳಿದ್ದಾರೆ.
ಸರಕಾರಿ ಮೂಲಗಳ ಪ್ರಕಾರ ಪಾಟಿಲ್ ತೀವ್ರ ಒತ್ತಡದಡಿ, ಇತ್ತೀಚಿಗಿನ ಮುಂಬೈ ಉಗ್ರರ ದಾಳಿಗೆ ನೈತಿಕ ಹೊಣೆ ಹೊತ್ತು ಕೊಂಡು ತಮ್ಮ ರಾಜಿನಾಮೆ ನೀಡಿದ್ದಾರೆ. ಪಾಟಿಲ್ ರಾಜಿನಾಮೆಯಿಂದ ತೆರವಾದ ಸ್ಥಾನವನ್ನು ಹಣಕಾಸು ಸಚಿವ ಪಿ ಚಿದಂಬರಂ ತುಂಬಿದ್ದಾರೆ. ಹಣಕಾಸು ಸಚಿವಾಲಯದ ಹೊಣೆಯನ್ನು ಸ್ವತಃ ಪ್ರಧಾನ ಮಂತ್ರಿಯವರೇ ವಹಿಸಿಕೊಂಡಿದ್ದಾರೆ.
ಈ ಕಡೆ ಶಿವರಾಜ್ ಪಾಟಿಲ್ ರಾಜಿನಾಮೆ ಪತ್ರಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಅಂತಿಮ ಅನುಮೋದನೆ ನೀಡಿದ ತುಸು ಹೊತ್ತಿನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಎಂಕೆ ನಾರಾಯಣನ್ ಕೂಡ ತಮ್ಮ ರಾಜಿನಾಮೆ ಪತ್ರವನ್ನು ನೀಡಿದರು. ಪ್ರಧಾನಿ ಮನ್‌ಮೋಹನ್ ಸಿಂಗ್ ಜತೆ ಎರಡು ತಾಸುಗಳ ಸಭೆ ನಡೆಸಿದ ಬಳಿಕ ನಾರಾಯಣನ್ ತಮ್ಮ ರಾಜಿನಾಮೆ ಪತ್ರವನ್ನು ನೀಡಿದರು ಆದರೆ ಪಧಾನಿ ಅವರ ರಾಜಿನಾಮೆ ಪತ್ರವನ್ನು ತಿರಸ್ಕರಿಸಿದರು.
ನಿನ್ನೆಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಹಿರಿಯ ಸದಸ್ಯರುಗಳ ತೀವ್ರ ತರಾಟೆಗೊಳಗಾದ ಪಾಟಿಲ್ ತಮ್ಮ ರಾಜಿನಾಮೆ ಪ್ರಸ್ತಾಪ ಇಟ್ಟಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇಂತಹ ದಾಳಿಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲರಾದದ್ದಕ್ಕಾಗಿ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಪ್ರಧಾನ ಮಂತ್ರಿಯವರೂ ಪಾಟಿಲ್ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|