ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಮುಂಬೈ ಸ್ಥಳೀಯರು ನೆರವು ನೀಡಿದರು: ಬಂಧಿತ ಉಗ್ರ
ಮುಂಬೈ, ಭಾನುವಾರ, 30 ನವೆಂಬರ್ 2008   ( 11:27 IST )
ಪೊಲೀಸರಿಂದ ಜೀವಂತವಾಗಿ ಬಂಧಿಸಲ್ಪಟ್ಟ ಏಕಮಾತ್ರ ಭಯೋತ್ಪಾದಕ ಅಜಮ್ ಅಮೀರ್ ಕಸಬ್, ಮುಂಬೈ ಉಗ್ರರ ಕಾರ್ಯಚರಣೆಗೆ ನೆರವು ನೀಡಿದ ಕನಿಷ್ಠ 5 ಮಂದಿಯ ಹೆಸರು ಹಾಗೂ ವಿಳಾಸಗಳನ್ನು ಬಹಿರಂಗ ಪಡಿಸಿದ್ದಾನೆ.

ಆಶ್ರಯ ನೀಡುವಿಕೆ, ಸ್ಥಳ ತೋರಿಸುವುದು, ಪೊಲೀಸ್ ಸ್ಟೇಷನ್ ಬಗ್ಗೆ ಮಾಹಿತಿ ನೀಡುವಾಗಿನ ಕೆಲ ನೆರವನ್ನು ಈ ಸ್ಥಳೀಯ ವ್ಯಕ್ತಿಗಳು ಒದಗಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ಸ್ಥಳೀಯರು ನೆರವು ನೀಡಿರುವ ಸಾಧ್ಯತೆ ಇದೆ ಆದರೆ ಇದನ್ನು ದೃಢಪಡಿಸಬೇಕಾಗಿದೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಈ ಬಗ್ಗೆ ಈಗಲೇ ಹೇಳುವುದು ಸೂಕ್ತವಲ್ಲ ಎಂಬುದಾಗಿ ಪೊಲೀಸ್ ಜಂಟಿ ಆಯುಕ್ತ ರಾಕೇಶ್ ಮರಿಯಾ ತಿಳಿಸಿದ್ದಾರೆ.

ಪ್ಯಾಲೆಸ್ತೀನ್‌ರ ಮೇಲಿನ ದೌರ್ಜನ್ಯಕ್ಕೆ ಪ್ರತಿಕಾರವಾಗಿ ಇಸ್ರೇಲ್ ನಾಗರಿಕರನ್ನು ಗುರಿಯಾಗಿಸುವ ವಿಶೇಷ ಮಿಷನ್‌ನೊಂದಿಗೆ ತಮ್ಮನ್ನು ಕಳುಹಿಸಲಾಗಿತ್ತು ಎಂಬುದಾಗಿ ಕಸಬ್ ಪೊಲೀಸರಿಗೆ ತಿಳಿಸಿದ್ದಾನೆ. ಈ ಕಾರಣದಿಂದಲೇ ಉಗ್ರರು ಬಹುವಾಗಿ ಇಸ್ರೇಲ್‌ ನಾಗರಿಕರೇ ತಂಗುವ ನಾರಿಮನ್ ಹೌಸ್ ಮೇಲೆ ದಾಳಿ ನಡೆಸಿದರು.

ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಕಸಬನ ಸಹವರ್ತಿಗಳು ಈ ಮುಂಚೆ ನಾರಿಮನ್ ಹೌಸ್‌ನಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ. ನಾರಿಮನ್ ಹೌಸ್ ಕೊಠಡಿಯನ್ನು ಇಸ್ರೇಲೇತರ ನಾಗರಿಕರಿಗೆ ಬಾಡಿಗೆ ನೀಡಿದ ಬಗ್ಗೆ ಪೊಲೀಸರು ಎಲ್ಲಾ ದಾಖಲೆ ಪುಸ್ತಕಗಳನ್ನು ಪರಾಮರ್ಶಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಿಎಂರಿಂದ ಭದ್ರತಾ ಸೇವಾ ಮುಖ್ಯಸ್ಥರ ಭೇಟಿ
ಮುಂಬೈ ವೀರ ಯೋಧರಿಗೆ ಅಂತಿಮ ನಮನ
ದೆಹಲಿ ಚುನಾವಣೆ: ಮತದಾನ ಆರಂಭ
ತಾಜ್ ಹಾನಿಯನ್ನು ವೀಕ್ಷಿಸಿದ ರತನ್ ಟಾಟಾ
ಕರ್ಕರೆ, ಇನ್ನಿಬ್ಬರು ಅಧಿಕಾರಿಗಳ ಕಗ್ಗೊಲೆ: ಪೇದೆ ವಿವರಣೆ
ತಾಜ್ ಹೊಟೆಲ್ ಸ್ಫೋಟಿಸಲು ಉಗ್ರರ ಸಂಚು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...