|
| ಮಗುವನ್ನು ವಾಪಸು ಪಡೆಯಲು ಕೋರ್ಟ್‌ಗೆ ಮೊರೆ |
| ನವದೆಹಲಿ, ಸೋಮವಾರ, 13 ಅಕ್ಟೋಬರ್ 2008 ( 16:38 IST ) | |
ವಿವಾಹಕ್ಕೆ ಮುನ್ನವೇ ಹುಟ್ಟಿದ ಮಗುವನ್ನು ಸಮಾಜದ ಕಳಂಕಕ್ಕೆ ಹೆದರಿ ಪರಿಚಯಸ್ಥರಿಗೆ ನೀಡಿದ್ದ ಮಹಿಳೆಯೊಬ್ಬರು ಈಗ ಆ ಮಗುವನ್ನು ದಂಪತಿಯಿಂದ ವಾಪಸು ಪಡೆಯಲು ಕಾನೂನಿನ ಸಮರಕ್ಕೆ ಇಳಿದಿದ್ದು, ಮಗುವನ್ನು ಪುನಃ ಪಡೆಯುವ ಆಶಾಕಿರಣ ಮೂಡಿದೆ. ಪ್ರಸಕ್ತ ಸುಪರ್ದುದಾರರಿಗೆ ತಾತ್ಕಾಲಿಕ ಆಧಾರದ ಮೇಲೆ ಮಗುವನ್ನು ನೀಡಿದ್ದಾಗಿ ವಿಚಾರಣೆ ನ್ಯಾಯಾಲಯ ತಿಳಿಸಿದೆ.
ಒಂದು ವರ್ಷ ವಯಸ್ಸಿನ ಮಗುವನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನವೀನ್ ಅರೋರಾ, ಮಗುವನ್ನು ದಂಪತಿಗೆ ತಾತ್ಕಾಲಿಕವಾಗಿ ಹಸ್ತಾಂತರಿಸಲಾಗಿದ್ದು, ಅವರ ವಶಕ್ಕೆ ಒಪ್ಪಿಸಿದ ಸಂದರ್ಭಗಳು ಅರ್ಥವಾಗುತ್ತದೆ ಎಂದು ತಿಳಿಸಿದೆ.
ಸಮಾಜದ ಕಳಂಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಗುವನ್ನು ನೀಡಲಾಯಿತೆನ್ನುವುದು ಸ್ಥಿರಪಟ್ಟಿದ್ದು, ಬಳಿಕ ಮಹಿಳೆ ಮಗುವಿನ ತಂದೆಯನ್ನು ಮದುವೆಯಾಗಿದ್ದು, ಮೇಲ್ನೋಟಕ್ಕೆ ಮಗುವನ್ನು ತಾತ್ಕಾಲಿಕ ಆಧಾರದ ಮೇಲೆ ನೀಡಿದ್ದು ಸಾಬೀತಾಗಿದೆ ಎಂದು ಅವರು ನುಡಿದರು.
ತಾವು 17 ದಿನಗಳ ಮಗುವನ್ನು ನಾಲ್ಕು ತಿಂಗಳ ಮಟ್ಟಿಗೆ ಇಟ್ಟುಕೊಳ್ಳುವಂತೆ ದಂಪತಿಗೆ ಹಸ್ತಾಂತರಿಸಿದೆವು. ಆದರೆ ನ.22ರಂದು ಮದುವೆಯಾಗಿ ಮಗುವನ್ನು ಹಿಂತಿರುಗಿಸುವಂತೆ ಮೇಲಿಂದ ಮೇಲೆ ಒತ್ತಾಯಿಸಿದರೂ ದಂಪತಿ ಮಗುವನ್ನು ಒಪ್ಪಿಸಲು ನಿರಾಕರಿಸಿದರು ಎಂದು ಮಹಿಳೆ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|