ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಉಗ್ರರ ಬೆಂಬಲಿಗರ ವಿರುದ್ಧ ರಾಷ್ಟ್ರೀಯ ಒಮ್ಮತ: ಮೋದಿ ಕರೆ
ನವದೆಹಲಿ, 13 ಅಕ್ಟೋಬರ್ 2008   ( 13:56 IST )
ಮಾನವ ಹಕ್ಕು ಹೆಸರಿನಲ್ಲಿ ಭಯೋತ್ಪಾದಕ ಅಂಶಗಳನ್ನು ಬೆಂಬಲಿಸುತ್ತಿರುವವರ ವಿರುದ್ಧ ರಾಷ್ಟ್ರೀಯ ಒಮ್ಮತಕ್ಕಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮಾನವ ಹಕ್ಕು ಹೆಸರಿನಲ್ಲಿ ಭಯೋತ್ಪಾದಕ ಅಂಶಗಳನ್ನು ಬೆಂಬಲಿಸುವ ಅಂತಹ ಜನರು, ಸಮೂಹ, ಹಾಗೂ ಬುದ್ಧಿವಂತರು ಎಂದು ಕರೆಯಲ್ಪಡುವವರನ್ನು ಪ್ರತ್ಯೇಕಿಸಲು ರಾಷ್ಟ್ರೀಯ ಒಮ್ಮತದ ಅಗತ್ಯವಿದೆ ಎಂದು ಮೋದಿ ರಾಷ್ಟ್ರೀಯ ಏಕೀಕರಣ ಸಮಿತಿಯನ್ನು ಉದ್ದೇಶಿಸಿ ಹೇಳಿದರು.

ತಮ್ಮ ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಬೆಂಬಲ ನೀಡುವವರು ಮತ್ತು ಬೆಂಬಲ ನೀಡದವರ ನಡುವೆ ಸ್ಪಷ್ಟ ರೇಖೆಯನ್ನು ಎಳೆಯ ಬೇಕು ಎಂದು ಅವರು ಹೇಳಿದರು.

ಸಮುದಾಯ, ಧರ್ಮ ಅಥವಾ ಮಾನವ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ಹಲವು ವ್ಯಕ್ತಿಗಳು ಅಥವಾ ಸಂಘಟನೆಗಳು ಉಗ್ರವಾದ ಅಂಶಗಳಿಗೆ ಪರೋಕ್ಷ ಅಥವಾ ನೇರ ಬೆಂಬಲವನ್ನು ನೀಡುತ್ತಿದ್ದಾರೆ. ಇದು ತಮ್ಮ ಭದ್ರತಾ ಪಡೆಗಳ ಆತ್ಮಸ್ಥೈರ್ಯವನ್ನು ಕುಂದಿಸುತ್ತದೆ ಎಂದು ತಿಳಿಸಿದರು.

ಭಯೋತ್ಪಾದನೆಯನ್ನು ಮಟ್ಟ ಹಾಕಲು ಅಸಾಧಾರಣ ಪ್ರತಿಕ್ರಿಯೆಗಳ ಅಗತ್ಯದ ಬಗ್ಗೆ ಸಲಹೆ ನೀಡಿದ ಮೋದಿ, ರಾಜ್ಯದ ಭಯೋತ್ಪಾದನೆ ವಿರೋಧಿ ಕಾನೂನು ಗುಜ್‌ಕೋಕ್‌ಗೆ ಅನುಮೋದನೆ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದರು.

ಅಸಾಧಾರಣ ಸವಾಲುಗಳಿಗೆ ಅಸಾಧಾರಣ ಪ್ರತಿಕ್ರಿಯೆಗಳ ಅಗತ್ಯವಿದೆ. ಕಠಿಣ ಕಾನೂನು ಕೇವಲ ಭಯೋತ್ಪಾದನೆ ಅಪರಾಧ ಎಸಗುವವರನ್ನು ಶಿಕ್ಷಿಸಲು ಮಾತ್ರವಲ್ಲ, ತಮ್ಮ ಸುಶಿಕ್ಷಿತ ಯುವ ಜನಾಂಗ ಭಯೋತ್ಪಾದನೆ ವಿಚಾರಧಾರೆಗೆ ಆಕರ್ಷಣೆಗೊಳಗಾಗುವುದನ್ನು ತಪ್ಪಿಸಲೂ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಾಸ್‌ಮುನ್ಶಿ ಏಮ್ಸ್‌ಗೆ ಸೇರ್ಪಡೆ, ಪರಿಸ್ಥಿತಿ ಗಂಭೀರ
ಎನ್ಐಸಿ ಸಭೆ: ಕೋಮು ಗಲಬೆ ಅಂತ್ಯಕ್ಕೆ ಪಿಎಂ ಕರೆ
ಆಗ್ರಾ: ಶವವಾಗಿ ಹೊರಬಂದ ಸೋನು
ಅದಿಲಾಬಾದ್ ದೊಂಬಿ: ಸಿಬಿಐ ತನಿಖೆಗೆ ಆದೇಶ
ರಾಷ್ಟ್ರಪತಿಗೆ ಬೆದರಿಕೆ ಇ-ಮೇಲ್
ಕ್ರೈಸ್ತ ಸನ್ಯಾಸಿನಿ ಆತ್ಯಾಚಾರ: ಮೂವರ ಬಂಧನ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...