|
| ದಾಸ್‌ಮುನ್ಶಿ ಏಮ್ಸ್‌ಗೆ ಸೇರ್ಪಡೆ, ಪರಿಸ್ಥಿತಿ ಗಂಭೀರ |
| ನವದೆಹಲಿ, ಸೋಮವಾರ, 13 ಅಕ್ಟೋಬರ್ 2008 ( 13:34 IST ) | |
ಹೃದಯ ಸಮಸ್ಯೆಯ ಹಿನ್ನೆಲೆಯಲ್ಲಿ ಮಾಹಿತಿ ಹಾಗೂ ಪ್ರಸಾರಣಾ ಸಚಿವ ಪ್ರಿಯ ರಂಜನ್ ದಾಸ್‌ಮುನ್ಶಿರನ್ನು ಇಂದು ಬೆಳಗ್ಗೆ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ದಾಸ್‌ಮುನ್ಶಿಯವರನ್ನು ಬೆಳಗ್ಗೆ ಸುಮಾರು 2.30ಕ್ಕೆ ಹೃದಯಶಾಸ್ತ್ರ ವಿಭಾಗಕ್ಕೆ ಸೇರಿಸಲಾಯಿತು. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರಿಗೆ ಉಸಿರಾಟ ಸಂಬಂಧಿ ಸಲಕರಣೆಗಳನ್ನು ಜೋಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
62 ವರ್ಷದ ದಾಸ್‌ಮುನ್ಶಿಯವರನ್ನು ಗಂಭೀರ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶ ನಿಬಿಡತೆಯೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರನ್ನು ಮೊದಲಿಗೆ ಸಾಮನ್ಯ ವಿಂಗ್‌ಗೆ ಕರೆದೊಯ್ಯಲಾಯಿತು, ಅವರ ಪರಿಸ್ಥಿತಿ ಸ್ಥಿರಗೊಂಡ ಬಳಿಕ ಅವರನ್ನು ಸಿಸಿಯುಗೆ ಸೇರಿಸಲಾಗಿದೆ ಎಂದು ಏಮ್ಸ್ ವಕ್ತಾರ ಗುಪ್ತಾ ತಿಳಿಸಿದ್ದಾರೆ. ಅವರ ಪ್ರಮುಖ ಅಂಗಾಂಗಗಳು ಸ್ಥಿರವಾಗಿದೆ ಆದರೆ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|