|
| ಎನ್ಐಸಿ ಸಭೆ: ಕೋಮು ಗಲಬೆ ಅಂತ್ಯಕ್ಕೆ ಪಿಎಂ ಕರೆ |
| ನವದೆಹಲಿ, ಸೋಮವಾರ, 13 ಅಕ್ಟೋಬರ್ 2008 ( 13:29 IST ) | |
ರಾಷ್ಟ್ರೀಯ ಏಕೀಕರಣ ಸಮಿತಿ (ಎನ್ಐಸಿ)ಯ 14ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ದೇಶದಾದ್ಯಂತ ನಡೆಯುತ್ತಿರುವ ಕೋಮು ಗಲಭೆಗೆ ಅಂತ್ಯ ಹಾಡುವಂತೆ ಕರೆ ನೀಡಿದ್ದಾರೆ.
ಗಲಬೆಕೋರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿರುವ ಪ್ರಧಾನಿ, ಕೋಮು ಹಿಂಸಾಚಾರದಲ್ಲಿ ತೊಡಗಿರುವ ಶಕ್ತಿಗಳನ್ನು ದೃಢವಾಗಿ ಮಟ್ಟ ಹಾಕಲಾಗುವುದು ಎಂದು ತಿಳಿಸಿದರು.
ಇತ್ತೀಚಿಗಿನ ಒರಿಸ್ಸಾ ಮತ್ತು ಕರ್ನಾಟಕದಲ್ಲಿನ ಕೋಮು ಹಿಂಸಾಚಾರವನ್ನು ಅತ್ಯಂತ ಮನಕಲಕುವ ಹಾಗೂ ಅಪಾಯಕಾರಿ ಎಂಬುದಾಗಿ ಕರೆದ ಪ್ರಧಾನಿ, ಕೋಮು ಸೌಹಾರ್ಧತೆ, ಒಗ್ಗಟ್ಟು ಮತ್ತು ಶಾಂತಿಗೆ ಭೀತಿಯೊಡ್ಡುವವರು ಅತ್ಯಂತ ಕಠಿಣ ಶಿಕ್ಷೆಗೆ ಯೋಗ್ಯರು ಎಂದು ತಿಳಿಸಿದ್ದಾರೆ.
ದ್ವೇಷ ಹಾಗೂ ಹಿಂಸಾಚಾರ ವಾತಾವರಣವನ್ನು ಕೃತಕವಾಗಿ ಸೃಷ್ಠಿಸಲಾಗುತ್ತಿದೆ ಎಂದು ಸಿಂಗ್ ಇದೇ ವೇಳೆ ತಿಳಿಸಿದ್ದಾರೆ. ಇಂತಹ ಮನೋಭಾವವನ್ನು ಕೆಲ ಶಕ್ತಿಗಳು ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಇವುಗಳನ್ನು ದೃಢವಾಗಿ ಮಟ್ಟಹಾಕುವ ಅಗತ್ಯವಿದೆ ಎಂದು ಹೇಳಿದ ಮನಮೋಹನ್ ಸಿಂಗ್, ದೇಶದ ಸಂಯುಕ್ತ ಸಂಸ್ಕೃತಿ ಮೇಲಿನ ದಾಳಿ ಬಹುಶಃ ಅತ್ಯಂತ ಮನಕಲಕುವ ಹಾಗೂ ಅಪಾಯಕಾರಿ ಅಂಶವಾಗಿದೆ ಎದು ತಿಳಿಸಿದ್ದಾರೆ.
ದೇಶದ ಬಹು ಸಂಸ್ಕೃತಿಯನ್ನು ಕಾಪಾಡುವುದು ರಾಜಕೀಯ ನಾಯಕತ್ವದ ಜವಬ್ದಾರಿಯಾಗಿದೆ ಎಂದು ಹೇಳಿದ ಪ್ರಧಾನಿ, ಸದಸ್ಯರಲ್ಲಿ ತಮ್ಮ ಸಲಹೆಗಳನ್ನು ಎದುರಿಗಿಡುವಂತೆ ಮನವಿ ಮಾಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|