|
| ಆಗ್ರಾ: ಶವವಾಗಿ ಹೊರಬಂದ ಸೋನು |
| ಆಗ್ರಾ, ಸೋಮವಾರ, 13 ಅಕ್ಟೋಬರ್ 2008 ( 12:59 IST ) | |
ನಾಲ್ಕು ದಿನಗಳ ಹಿಂದೆ ಕೊಳವೆ ಭಾವಿಗೆ ಬಿದ್ದಿದ್ದ ಎರಡು ವರ್ಷದ ಹುಡುಗ ಸೋನುವನ್ನು ಸೇನಾ ರಕ್ಷಣಾ ತಂಡ ಕೊನೆಗೂ ಹೊರ ತೆಗೆಯಿತಾದರೂ, ಪ್ರಾಥಮಿಕ ಪರೀಕ್ಷೆ ನಡೆಸಿದ ವೈದ್ಯರು ಈ ಮಗು ಅಸುನೀಗಿರುವುದಾಗಿ ಘೋಷಿಸಿದರು.
ಸುಮಾರು 90 ಗಂಟೆಗಳ ಕಾಲ ಈ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸೋನುವನ್ನು ಹೊರತೆಗೆದ ಕೂಡಲೇ ಆತನನ್ನು ನೇರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸೋನುವನ್ನು ಪರೀಕ್ಷಿಸಿದ ವೈದ್ಯ ಎಸ್ಎನ್ ಪ್ರಜಾಪತಿ ಸುದ್ಧಿ ವಾಹಿನಿಗಳಲ್ಲಿ ಮಾತನಾಡುತ್ತಾ, ಸೋನು ಕರೆತರುವಾಗಲೇ ಅಸುನೀಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಆತನ ಸಾವಿನ ಕಾರಣವನ್ನು ತಿಳಿಯಬಹುದು ಎಂದು ಹೇಳಿದ್ದಾರೆ.
ಹುಡುಗ ಸಿಕ್ಕಿ ಬಿದ್ದಿದ್ದ ಕೊಳವೆ ಭಾವಿಯ ಸ್ಥಳವನ್ನು ತಲುಪುವಲ್ಲಿ ರಕ್ಷಣಾಕರ್ತರು ನಿರಂತರವಾಗಿ ಅಡಚಣೆ ಎದುರಿಸಿದ ಕಾರಣ ಸೋನುವಿನ ಬದುಕುವ ಆಶಾಕಿರಣ ಬತ್ತಿ ಹೋಗಿತ್ತು. ಈ 150 ಅಡಿಯ ಕೊಳವೆ ಭಾವಿಗೆ ಸಮೀಪವಾಗಿ ತೊಡಲಾದ ಸಮಾನಾಂತರ ಕುಳಿಯನ್ನು ಸಂಪರ್ಕಿಸಲು ಸುರಂಗವನ್ನು ತೋಡಲು ಸೇನಾ ತಂಡ ನೆರವು ನೀಡಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|