|
| ಭಜರಂಗದಳದ ನಿಷೇಧಕ್ಕೆ ಕಾಂಗ್ರೆಸ್ ಆಗ್ರಹ |
| ನವದೆಹಲಿ, 11 ಅಕ್ಟೋಬರ್ 2008 ( 19:54 IST ) | |
ಹಿಂದುಸಂಘಟನೆ ಭಜರಂಗದಳವನ್ನು ಭಯೋತ್ಪಾದನೆ ಸಂಘಟನೆಗಳಿಗೆ ಹೋಲಿಸಿರುವ ಕಾಂಗ್ರೆಸ್ ಈ ಸಂಘಟನೆಯು ಕಳಂಕಿತವಾಗಿರುವುದರಿಂದ ನಿಷೇಧಿಸಲು ಯೋಗ್ಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಸಿಮಿ ನಿಷೇಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಆಳ್ವಿಕೆಯ ರಾಜ್ಯಗಳು ಸೇರಿದಂತೆ ರಾಜ್ಯಸರ್ಕಾರಗಳು ತಮ್ಮ ಶಿಫಾರಸುಗಳನ್ನು ಒಡನೆಯೇ ಕಳಿಸಿ ಅದನ್ನು ನಿಷೇಧಿಸುವಂತೆ ತಿಳಿಸಿದ್ದವು ಎಂದು ಅದು ತಿಳಿಸಿದೆ.
ಭಯೋತ್ಪಾದಕರು ಅಡಗಿಕೊಂಡು ದುಷ್ಕೃತ್ಯಗಳನ್ನು ಎಸಗಿದರೆ ಭಜರಂಗದಳವು ಮುಕ್ತವಾಗಿ ಆ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ ಮಾಧ್ಯಮಇಲಾಖೆಯ ಮುಖ್ಯಸ್ಥ ವೀರಪ್ಪ ಮೊಯ್ಲಿ ನವದೆಹಲಿಯಲ್ಲಿ ವರದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು.ತಮ್ಮ ಉಳಿವಿಗೆ ಆಮ್ಲಜನಕದಂತೆ ಭಜರಂಗದಳವು ಕೆಲಸ ಮಾಡುತ್ತದೆ ಎಂದು ಬಿಜೆಪಿ ಆಳ್ವಿಕೆಯ ರಾಜ್ಯಗಳ ಭಾವನೆ ದುರದೃಷ್ಟಕರ ಎಂದು ಮೊಯ್ಲಿ ತಿಳಿಸುತ್ತಾ, ಸಂಘಪರಿವಾರದ ಸಂಘಟನೆ ಕ್ರೈಸ್ತವಿರೋಧಿ ಹಿಂಸಾಚಾರದಲ್ಲಿ ವಹಿಸಿದ ಪಾತ್ರಕ್ಕಾಗಿ ಟೀಕಾಪ್ರಹಾರ ಮಾಡಿದರು.
ಭಜರಂಗದಳಕ್ಕೆ ಸಂಬಂಧಪಟ್ಟಂತೆ ಅದರ ನಿಷೇಧಕ್ಕೆ ಬಿಜೆಪಿ ಆಳ್ವಿಕೆಯ ರಾಜ್ಯಗಳು ಒತ್ತಾಯ ಮಾಡಲಿಲ್ಲ. ಇದರಿಂದ ಆ ಸಂಘಟನೆ ಜತೆ ಬಿಜೆಪಿ ಸಖ್ಯ ಹೊಂದಿರುವುದನ್ನು ತೋರಿಸುತ್ತದೆ ಎಂದು ಮೊಯ್ಲಿ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|