|
| ಇಂದು ಕಾಶ್ಮೀರದಲ್ಲಿ ರೈಲು ಸಂಚಾರಕ್ಕೆ ಹಸಿರುನಿಶಾನೆ |
| ಜಮ್ಮು, ಶನಿವಾರ, 11 ಅಕ್ಟೋಬರ್ 2008 ( 18:57 IST ) | |
ಕಾಶ್ಮೀರದ ಕಣಿವೆಯಲ್ಲಿ ಮೊದಲ ಬಾರಿಗೆ ರೈಲು ಸಂಚಾರವನ್ನು ಪ್ರಧಾನಿ ಮನ್‌ಮೋಹನ್ ಸಿಂಗ್ ಇಂದು ಉದ್ಘಾಟಿಸಲಿದ್ದಾರೆ. ಶುಕ್ರವಾರದಂದು ಪ್ರಧಾನಿ ಜಲವಿದ್ಯುತ್ ಘಟಕವನ್ನು ಉದ್ಘಾಟಿಸಿದ್ದರು. ಎರಡು ದಿನದ ಜಮ್ಮು ಕಾಶ್ಮೀರ ಭೇಟಿಯಲ್ಲಿರುವ ಪ್ರಧಾನಿ ಮನ್‌ಮೋಹನ್ ಸಿಂಗ್ ನೌಗಾಂಮ್ ರೈಲು ನಿಲ್ದಾಣದ ಮೊದಲ ರೈಲುಯೂನವನ್ನು ಇಂದು ಉದ್ಘಾಟಿಸಲಿದ್ದಾರೆ.
ಪ್ರಾರಂಭದಲ್ಲಿ ರೈಲು ಯಾನವು ಶ್ರೀನಗರದಿಂದ ತೊಡಗಿ ಅನಟಾಂಗ್ ತನಕ ಸಂಚರಿಸಲಿದೆ.ಅನಂತರ ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸಲಿದೆ. ಹಿಮಾಲಯ ಪರ್ವತಗಳ ನಡುವೆ ರೈಲು ಹಳಿಗಳು ಹಾದುಹೋಗುವುದರಿಂದ ಒಂದು ವರ್ಷಕ್ಕಿಂತ ಹೆಚ್ಚು ಕಾಲ ರೈಲು ಸಂಚಾರ ವಿಳಂಬವಾಯಿತು. ಖಾಜಿಗಂಡ್ ಮತ್ತು ಉದಾಂಪುರದ ಕಡಿದಾದ ಪ್ರದೇಶದಲ್ಲಿ ಹಳಿಗಳನ್ನು ಅಳವಡಿಸುವುದು ಸವಾಲಿನ ಕೆಲಸವಾಗಿತ್ತು.
ಭಾರತೀಯ ರೈಲ್ವೆ ಕಾಶ್ಮೀರದ ಕಣಿವೆಯಲ್ಲಿ ರೈಲು ಸಂಚಾರದಲ್ಲಿ ಯಶಸ್ವಿಯಾಗಿರುವುದು ಐತಿಹಾಸಿಕ ಕ್ಷಣವಾಗಿದೆಯೆಂದು ಉತ್ತರ ರೈಲ್ವೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ ಕೆ ಗುಪ್ತ ತಿಳಿಸಿದರು.
ನಾವು ಭೂವೈಜ್ಙಾನಿಕ ಅಚ್ಚರಿಗಳನ್ನು ಎದುರಿಸುತ್ತಿದ್ದೇವೆ.ಇದು ಎಂಜಿನಿಯರ್‌ಗಳಿಗೆ ದೊಡ್ಡ ಸವಾಲಾಗಿದೆ ಮತ್ತು ತಾಂತ್ರಿಕವಾಗಿ ಸಮಸ್ಯೆಗಳುಂಟಾದಾಗ ಇದನ್ನು ನಾವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ನಿಭಾಯಿಸುತ್ತೇವೆಯೆಂದು ಗುಪ್ತ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|