ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಅಮೆರಿಕ-ಪಾಕ್ ಅಣುಬಂಧಕ್ಕೆ ಆಕ್ಷೇಪವಿಲ್ಲ: ಪ್ರಣಬ್
ವಾಷಿಂಗ್ಟನ್, ಶನಿವಾರ, 11 ಅಕ್ಟೋಬರ್ 2008   ( 13:38 IST )
ಪಾಕಿಸ್ತಾನ ಅಮೆರಿಕ ಜತೆ ನಾಗರಿಕ ಒಪ್ಪಂದ ಮಾಡುವುದರಿಂದ ತಮಗೇನು ಸಮಸ್ಯೆ ಇಲ್ಲ ಎಂದು ಹೇಳಿರುವ ಭಾರತ, ಶಾಂತಿಯುತ ಉದ್ದೇಶಕ್ಕಾಗಿ ಪ್ರತಿ ದೇಶಕ್ಕೂ ಪರಮಾಣು ಇಂಧನ ಬಳಸುವ ಹಕ್ಕು ಇದೆ ಎಂಬುದು ತನ್ನ ಅಭಿಪ್ರಾಯ ಎಂಬುದಾಗಿ ತಿಳಿಸಿದೆ.

ಪರಮಾಣು ಇಂಧನದ ಶಾಂತಿಪೂರ್ಣ ಬಳಕೆಗಾಗಿನ ನಾಗರಿಕ ಅಣು ಸಹಕಾರವನ್ನು ತಾವು ಪ್ರೋತ್ಸಾಹಿಸುತ್ತೇವೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸುದ್ಧಿ ಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.

ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಇಂಧನ ಬಳಸುವ ಹಕ್ಕು ಪ್ರತಿಯೊಂದು ದೇಶಗಳಿಗಿದೆ ಎಂದು ಪ್ರಣಬ್ ತಿಳಿಸಿದರು. ಅಮೆರಿಕ ಜತೆ ಭಾರತ ರೀತಿಯ ಅಣು ಒಪ್ಪಂದಕ್ಕಾಗಿನ ಇಸ್ಲಾಮಾಬಾದ್ ಬೇಡಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

ಅಣು ಒಪ್ಪಂದವಾಗಿನ ಪಾಕಿಸ್ತಾನದ ಆತಂಕದ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ ಮುಖರ್ಜಿ, ಪಾಕ್ ಜತೆ ಉತ್ತಮ ಸಂಬಂಧ ಹೊಂದಲು ಭಾರತ ಉತ್ಸುಕವಾಗಿದೆ ಮತ್ತು ಸಮಗ್ರ ಮಾತುಕತೆ ಪ್ರಕ್ರಿಯೆಯ ಮೂಲಕ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ವಿವರಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಂಧ್ರ ಪಟ್ಟಣದಲ್ಲಿ ಕೋಮು ಗಲಭೆ; ಕರ್ಫ್ಯೂ ಹೇರಿಕೆ
123 ಒಪ್ಪಂದದ ಕರಡುಗೆ ಭಾರತ ಬದ್ಧ: ಪ್ರಣಬ್
ಅಣುಬಂಧ ಸಾಕಾರ: 123 ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ
ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಗಿಲ್ ಸಂಕಲ್ಪ
ನಿರ್ಗತಿಕರ ಪರ ಹೋರಾಡಿದ ಕಾನ್ಶಿರಾಂ: ಮಾಯಾವತಿ
ಧುಲೆ ದೊಂಬಿ: ಕರ್ಫ್ಯೂ ಸಡಿಲ, ಪರಿಸ್ಥಿತಿ ಶಾಂತ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...