ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಆಂಧ್ರ ಪಟ್ಟಣದಲ್ಲಿ ಕೋಮು ಗಲಭೆ; ಕರ್ಫ್ಯೂ ಹೇರಿಕೆ
ಹೈದರಾಬಾದ್, ಶನಿವಾರ, 11 ಅಕ್ಟೋಬರ್ 2008   ( 13:08 IST )
ಆಂಧ್ರಪ್ರದೇಶದ ಭೈನ್ಸಾ ಪಟ್ಟಣದಲ್ಲಿ ನಿನ್ನೆ ಉದ್ಬವಿಸಿದ ಕೋಮು ಗಲಭೆ ಮತ್ತು ತದನಂತರದ ಪೊಲೀಸ್ ಗೋಲಿಬಾರ್‌ನಿಂದ ನಾಲ್ಕು ಮಂದಿ ಸಾವು ಹಾಗೂ 15 ಮಂದಿ ಗಾಯಗೊಂಡಿದ್ದು, ಪ್ರದೇಶದಲ್ಲಿ ಕರ್ಫ್ಯೂ ಹೇರಲಾಗಿದೆ.

ಭೈನ್ಸಾ ಪಟ್ಟಣದಲ್ಲಿ ದುರ್ಗೆ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು.

ನಿನ್ನೆ ಹೇರಲಾದ ಅನಿರ್ದಿಷ್ಟಾವಧಿ ಕರ್ಫ್ಯೂ ಶನಿವಾರವೂ ಮುಂದುವರಿದಿದೆ. ಪಟ್ಟಣದಲ್ಲಿನ ಪರಿಸ್ಥಿತಿ ಇನ್ನೂ ಪ್ರಕ್ಷುಬ್ದವಾಗಿದ್ದು, ಯಾವುದೇ ಹೊಸ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರರ್ಥನಾ ಸ್ಥಳದ ಸನಿಹ ಮೆರವಣಿಗೆ ಸಾಗುತ್ತಿರುವ ವೇಳೆ ಈ ಘರ್ಷಣೆ ಉದ್ಭವಿಸಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು ಬಣ್ಣದ ಪುಡಿಯನ್ನು ಎರಚಿ, ಪ್ರಾರ್ಥನಾ ಸ್ಥಳದ ಮೇಲೆ ಕಲ್ಲುಗಳನ್ನು ಎಸೆದರು ಎಂಬುದು ಒಂದು ಗುಂಪಿನ ಹೇಳಿಕೆಯಾದರೆ, ಮತ್ತೊಂದು ಗುಂಪು ಮೆರವಣಿಗೆ ಮೇಲೆ ದಾಳಿ ಮಾಡಲಾಯಿತು ಎಂಬುದಾಗಿ ಹೇಳಿಕೊಂಡಿದೆ.

ಎರಡೂ ಗುಂಪುಗಳು ಕಲ್ಲು, ಕತ್ತಿ ಮತ್ತು ಇತರ ಹರಿತವಾದ ಶಸ್ತ್ರಗಳೊಂದಿಗೆ ಪರಸ್ಪರರ ಮೇಲೆ ದಾಳಿ ನಡೆಸಿತು. ಉದ್ವೇಗಗೊಂಡ ಗುಂಪು ಕಂಡವರ ಮೇಲೆ ಹಲ್ಲೆ, ಲೂಟಿಗೆ ಮೊರೆ ಹೋಗಿ, 40 ಅಂಗಡಿ ಮತ್ತು 12 ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಪೊಲೀಸರು ತಿಳಿಸಿದರು.

ಹಿಂಸಾತ್ಮಕ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಆದರೆ ಇದು ಯಾವುದೇ ರೀತಿಯ ಪರಿಣಾಮ ಬೀರುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಗಾಳಿಯಲ್ಲಿ 35 ಸುತ್ತು ಗುಂಡು ಹಾರಿಸಿದ ಬಳಿಕ ಪೊಲೀಸರು ಹಿಂಸಾನಿರತ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಹೆಚ್ಚುವರಿ ಪಡೆಗಳೊಂದಿಗೆ ಜಿಲ್ಲಾ ಪೊಲೀಸ್ ಸುಪರಿಟೆಂಡೆಂಟ್ ಅನಿಲ್ ಕುಮಾರ್ ಪಟ್ಟಣಕ್ಕೆ ಧಾವಿಸಿದರು. ಇತರ ಜಿಲ್ಲೆಗಳಿಂದ ಹೆಚ್ಚುವರಿ ಪಡೆಗಳನ್ನು ಕರೆ ತರಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
123 ಒಪ್ಪಂದದ ಕರಡುಗೆ ಭಾರತ ಬದ್ಧ: ಪ್ರಣಬ್
ಅಣುಬಂಧ ಸಾಕಾರ: 123 ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ
ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಗಿಲ್ ಸಂಕಲ್ಪ
ನಿರ್ಗತಿಕರ ಪರ ಹೋರಾಡಿದ ಕಾನ್ಶಿರಾಂ: ಮಾಯಾವತಿ
ಧುಲೆ ದೊಂಬಿ: ಕರ್ಫ್ಯೂ ಸಡಿಲ, ಪರಿಸ್ಥಿತಿ ಶಾಂತ
ಪಿತ್ತಕೋಶ ಚಿಕಿತ್ಸೆಗೊಳಗಾದ ದಲೈ ಲಾಮಾ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...