ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಅಣುಬಂಧ ಸಾಕಾರ: 123 ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ
ವಾಷಿಂಗ್ಟನ್, ಶನಿವಾರ, 11 ಅಕ್ಟೋಬರ್ 2008   ( 09:20 IST )
ಭಾರತ ಮತ್ತು ಅಮೆರಿಕ ಶುಕ್ರವಾರ 123 ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಐತಿಹಾಸಿಕ ದ್ವಿಪಕ್ಷೀಯ ನಾಗರಿಕ ಅಣು ಒಪ್ಪಂದವನ್ನು ಕಾರ್ಯಗತಗೊಳಿಸಲಾಗಿದೆ. ಇದೇ ವೇಳೆ ಭಾರತ, ಈ ಒಪ್ಪಂದ ಎರಡೂ ದೇಶಗಳನ್ನು ಕಾನೂನು ಬಾದ್ಯತೆಗೊಳಪಡಿಸುತ್ತದೆ ಎಂದು ಒತ್ತಿ ಹೇಳಿದೆ.

ವಿದೇಶಾಂಗ ಇಲಾಖೆಯ ಬೆಂಜಮಿನ್ ಪ್ರಾಂಕ್ಲಿನ್ ಕೊಠಡಿಯಲ್ಲಿ ನಡೆದ ಸಮಾರಂಭದಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತು ಅಮೆರಿಕ ವಿದೇಶಾಂಗ ಸಚಿವೆ ಕಾಂಡೊಲಿಸಾ ರೈಸ್ ಒಪ್ಪಂದಕ್ಕೆ ತಮ್ಮ ಅಂತಿಮ ಅಂಕಿತವನ್ನು ಹಾಕುವ ಮೂಲಕ ಜುಲೈ 2005ರಲ್ಲಿ ಆರಂಭಗೊಂಡಿದ್ದ ಈ ಸುದೀರ್ಘ ಪ್ರಕ್ರಿಯೆ ಅಂತ್ಯಗೊಂಡಿತು.

ಭಾರತ ಮತ್ತು ಅಮೆಟಕ ಎರಡೂ ದೇಶಗಳು ತಮ್ಮ ಆಂತರಿಕ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಮುಖರ್ಜಿ ನಂತರ ತಿಳಿಸಿದರು. ಇಂದು ಭಾರತ-ಅಮೆರಿಕ ಸಂಬಂಧ, ಜಾಗತಿಕ ಇಂಧನ ಭದ್ರತೆ ಮತ್ತು ನಿರಂತರ ಅಭಿವೃದ್ಧಿ ನಿಟ್ಟಿನಲ್ಲಿನ ತಮ್ಮ ಸಾಮಾನ್ಯ ನಿರಂತರ ಪ್ರಯತ್ನಗಾಗಿನ ಒಂದು ಅತಿ ಪ್ರಮುಖ ದಿನವಾಗಿದೆ ಎಂದು ಮುಖರ್ಜಿ ತಿಳಿಸಿದರು.

ಈ ಒಪ್ಪಂದ ಎಚ್ಚರಿಕೆಯುತ ಅಧಿಕಾರದ ಸಮಾನತೆ ಮತ್ತು ಬಾಧ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಮುಖರ್ಜಿ, ಇದರ ನಿಬಂಧನೆಗಳು ಈಗ ಎರಡೂ ದೇಶಗಳನ್ನು ಕಾನೂನು ಬಾಧ್ಯತೆಗೊಳಪಡಿಸುತ್ತದೆ ಎಂದು ಸ್ಪಷ್ಟಪೃಡಿಸಿದರು.

ಈ ಒಪ್ಪಂದಗಾಗಿನ ಸಹಿ ಮೂರು ವರ್ಷಗಳ ಭಾರತ ಮತ್ತು ಅಮೆರಿಕ ಪಟ್ಟ ಅಭೂತಪೂರ್ವ ಪ್ರಯತ್ನಕ್ಕೆ ಅಂತ್ಯ ಹಾಡಿದೆ ಮತ್ತು ಇದು ಎರಡು ದೇಶಗಳ ನಡುವಿನ ಪರಿವರ್ತಿತ ಸಂಬಂಧ ಹಾಗೂ ಪಾಲುದಾರಿಕೆಯ ಇನ್ನೊಂದು ಸಂಕೇತವಾಗಿದೆ ಎಂದು ವಿವರಿಸಿದರು.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಗಿಲ್ ಸಂಕಲ್ಪ
ನಿರ್ಗತಿಕರ ಪರ ಹೋರಾಡಿದ ಕಾನ್ಶಿರಾಂ: ಮಾಯಾವತಿ
ಧುಲೆ ದೊಂಬಿ: ಕರ್ಫ್ಯೂ ಸಡಿಲ, ಪರಿಸ್ಥಿತಿ ಶಾಂತ
ಪಿತ್ತಕೋಶ ಚಿಕಿತ್ಸೆಗೊಳಗಾದ ದಲೈ ಲಾಮಾ
123 ಒಪ್ಪಂದ ಅಂಕಿತಕ್ಕೆ ಪ್ರಣಬ್ ವಾಷಿಂಗ್ಟನ್‌ಗೆ
ಜಮ್ಮು ಕಾಶ್ಮೀರ: ಪ್ರಧಾನಿ ಭೇಟಿ, ಬಿಗಿ ಭದ್ರತೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...