|
| ಪರಮಾಣು ಹಕ್ಕು ಸಂಪೂರ್ಣ ಒತ್ತೆಗೆ ಸಮೀಪ: ಕಾರಟ್ |
| ನವದೆಹಲಿ, ಭಾನುವಾರ, 7 ಸೆಪ್ಟೆಂಬರ್ 2008 ( 17:43 IST ) | |
ಭಾರತಕ್ಕೆ ಪರಮಾಣು ವ್ಯಾಪಾರದ ಎನ್‌ಎಸ್‌ಜಿ ವಿನಾಯಿತಿ ಸಿಕ್ಕಿದ ಬಳಿಕ, ಈ ಬೆಳವಣಿಗೆಯನ್ನು ರಾಷ್ಟ್ರದ ಪರಮಾಣು ಹಕ್ಕುಗಳನ್ನು ಅಮೆರಿಕಕ್ಕೆ ಸಂಪೂರ್ಣ ಒತ್ತೆಯಿಡುವ ದಾರಿಯಲ್ಲೊಂದು ಹೆಜ್ಜೆ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಭಾನುವಾರ ಬಣ್ಣಿಸಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 123 ಒಪ್ಪಂದವನ್ನು ಕಾರ್ಯಗತಗೊಳಿಸಬೇಕಿದ್ದರಿಂದ ಅಮೆರಿಕ ಎನ್‌ಎಸ್‌ಜಿ ವಿನಾಯಿತಿಗೆ ಸೂತ್ರಧಾರನೆನಿಸಿತು ಎಂದು ಹೇಳಿದರು.ಕಾಂಗ್ರೆಸ್ ಹೊರತುಪಡಿಸಿ ಬೇರಾವುದೇ ಸರ್ಕಾರ ಬಂದರೂ ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ರದ್ದುಮಾಡುತ್ತದೆ ಎಂದು ಕಾರಟ್ ತಿಳಿಸಿದರು.
ಈ ವಿಷಯವಾಗಿ ಎಡಪಕ್ಷ ತನ್ನ ಹೋರಾಟವನ್ನು ಮುಂದುವರಿಸುತ್ತದೆಂದು ನುಡಿದರು. ಈಗ ಭಾರತವು ಅಣ್ವಸ್ತ್ರ ಪ್ರಸರಣ ನಿಷೇಧ ವಲಯದ ಭಾಗವಾಗಿದ್ದು, ಅದನ್ನು ತಾರತಮ್ಯವೆಂದು ಇಲ್ಲಿವರೆಗೆ ಪ್ರತಿಭಟಿಸುತ್ತಾ ಬಂದಿದ್ದೆವು ಎಂದು ಕಾರಟ್ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ |
| |
|
|
|
|
|
|
|