|
| ಗಡಿಗಳಲ್ಲಿ 500ಕ್ಕಿಂತ ಹೆಚ್ಚು ಗಡಿಠಾಣೆ |
| ನವದೆಹಲಿ, ಭಾನುವಾರ, 7 ಸೆಪ್ಟೆಂಬರ್ 2008 ( 15:05 IST ) | |
ದೇಶದ ಗಡಿಗಳಿಗೆ ಪೂರ್ಣ ರಕ್ಷಣೆ ನೀಡುವ ಕೇಂದ್ರ ಗೃಹಸಚಿವಾಲಯದ ಯೋಜನೆಯನ್ವಯ ಸುಮಾರು 1,800 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 500ಕ್ಕಿಂತ ಹೆಚ್ಚು ಗಡಿಠಾಣೆಗಳನ್ನು ಸ್ಥಾಪಿಸಲಾಗುತ್ತದೆ. ಭಾರತ-ಬಾಂಗ್ಲಾದ 4,097 ಕಿಮೀ ಮತ್ತು ಭಾರತ-ಪಾಕ್‌ನ 3323 ಕಿಮೀ ಗಡಿಯಲ್ಲಿ ಗಡಿಠಾಣೆಗಳ ನಡುವಿನ ಅಂತರವನ್ನು ತಗ್ಗಿಸುವ ಕ್ರಮವಾಗಿ ಹೆಚ್ಚುವರಿ 509 ಗಡಿಠಾಣೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
ಭಾರತ-ಬಾಂಗ್ಲಾ ಗಡಿಯಲ್ಲಿ 383 ಠಾಣೆಗಳನ್ನು ನಿರ್ಮಿಸಿದರೆ, ಉಳಿದವನ್ನು ಅಂತಾರಾಷ್ಟ್ರೀಯ ಗಡಿಗಳಲ್ಲಿ ಕಟ್ಟೆಚ್ಚರಕ್ಕಾಗಿ ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಅವರು ನುಡಿದರು.ಭಾರತ-ನೇಪಾಳದ 1751 ಕಿಮೀ ಗಡಿಯಲ್ಲಿ ಮತ್ತು ಭಾರತ-ಭೂತಾನ್‌ನ 699 ಕಿಮೀ ಗಡಿಯಲ್ಲಿ ಬಿಒಪಿಗಳ ನಡುವೆ ಉತ್ತಮ ಸಂಪರ್ಕವನ್ನು ಒದಗಿಸಲು ಉತ್ತರಖಂಡ, ಉತ್ತರಪ್ರದೇಶ, ಬಿಹಾರ ಮತ್ತು ಅಸ್ಸಾಂ ನಡುವೆ ಹಾದುಹೋಗುವ ಅಂತಾರಾಷ್ಟ್ರೀಯ ಗಡಿಯಲ್ಲಿ 1400 ಕಿಮೀ ಉದ್ದದ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಳ್ಳಲು ಗೃಹಸಚಿವಾಲಯ ನಿರ್ಧರಿಸಿದೆ.
ಏತನ್ಮಧ್ಯೆ, ಭಾರತ-ಪಾಕಿಸ್ತಾನ ಗಡಿಯಲ್ಲಿ 1912 ಕಿಮೀ ಬೇಲಿ ಮತ್ತು 1861 ಕಿಮೀ ಬೆಳಕಿನ ವ್ಯವಸ್ಥೆಯನ್ನು ಮುಗಿಸಲಾಗುವುದು. ಅಕ್ರಮ ನುಸುಳುವಿಕೆಯನ್ನು ತಡೆಯಲು ಇದು ಸಹಕಾರಿ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ |
| |
|
|
|
|
|
|
|