ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸಿಂಗೂರ್ ಮಾತುಕತೆ ಸೋಮವಾರ ಮುಂದೂಡಿಕೆ
ಕೋಲ್ಕತಾ, ಭಾನುವಾರ, 7 ಸೆಪ್ಟೆಂಬರ್ 2008   ( 11:59 IST )
ಸಿಂಗೂರ್‌ನಲ್ಲಿ ಟಾಟಾ ಮೋಟರ್ಸ್ ಸಣ್ಣ ಕಾರು ಯೋಜನೆಗೆ ಮಂಜೂರಾದ ಭೂಮಿಯ ಬಗ್ಗೆ ಉದ್ಭವಿಸಿರುವ ವಿವಾದ ಇತ್ಯರ್ಥಕ್ಕೆ ಸೂತ್ರವೊಂದನ್ನು ರಚಿಸಲಾಗಿದೆ ಎಂಬ ಸೂಚನೆಗಳ ನಡುವೆ, ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಆರಂಭಿಸಿದ ಎರಡನೇ ಸುತ್ತಿನ ಮಾತುಕತೆ ಶನಿವಾರ ಅಪೂರ್ಣವಾಗಿ ಉಳಿಯಿತು.

ಈ ಮಾತುಕತೆ ಸೋಮವಾರ ಮುಂದುವರಿಯಲಿದೆ ಎಂದು ಮ‌ೂಲಗಳು ಹೇಳಿದ್ದು, ಭಾನುವಾರ ಬೆಳಿಗ್ಗೆ ಎಡಸಮ್ಮಿಶ್ರ ಕೂಟದ ತುರ್ತು ಸಭೆ ಕರೆದಿರುವುದು ಸೂತ್ರವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎನ್ನುವುದಕ್ಕೆ ಧನಾತ್ಮಕ ಸಂಕೇತವಾಗಿದೆ ಎಂದು ತಿಳಿಸಿವೆ.


ಎಡರಂಗದ ತುರ್ತುಸಭೆಯು ಈಗಾಗಲೇ ಸೂತ್ರವನ್ನು ರೂಪಿಸಿರುವುದಕ್ಕೆ ಸಂಕೇತವಾಗಿದೆ ಎಂದು ಮ‌ೂಲಗಳು ಹೇಳಿವೆ. ಒಂದೊಮ್ಮೆ ಎಡಪಕ್ಷಗಳು ಅನುಮೋದಿಸಿದರೆ, ಸರ್ಕಾರವು ಸೂತ್ರಕ್ಕೆ ಬದ್ಧವಾಗಿ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಲಾಗಿದೆ.ತೃಣಮ‌ೂಲ ಬೆಂಬಲಿತ ರೈತರ ತಂಡವು ಟಾಟಾ ಮೋಟರ್ಸ್‌ಗೆ ಮಂಜೂರು ಮಾಡಿರುವ 997.1 ಎಕರೆಗಳ ಪೈಕಿ 400 ಎಕರೆಗಳನ್ನು ಹಿಂತಿರುಗಿಸಬೇಕೆಂದು ಒತ್ತಾಯಿಸುತ್ತಿದೆ.

ಈ ಭೂಮಿಯನ್ನು ರೈತರಿಂದ ಬಲಪ್ರಯೋಗದ ಮ‌ೂಲಕ ಕಸಿಯಲಾಗಿದೆ ಎಂದು ತೃಣಮ‌ೂಲ ಆರೋಪಿಸಿದೆ. ಆದರೆ ಯೋಜನೆಗೆ ಮಂ‌‌ಜೂರಾದ ಭೂಮಿಯನ್ನು ಹಿಂತಿರುಗಿಸಿದರೆ ಇಡೀ ಯೋಜನೆ ನಿಷ್ಫಲವಾಗುತ್ತದೆ ಎಂದು ರಾಜ್ಯಸರ್ಕಾರ ವಾದಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನ್ಯುಮೋನಿಯ ಲಸಿಕೆ ನಿಷ್ಫಲ, ಆಸ್ತಮ ಅಪಾಯ ಹೆಚ್ಚಳ
ಪರಮಾಣು ಒಪ್ಪಂದ: ಭಾರತಕ್ಕೆ ಹಸಿರು ನಿಶಾನೆ
ಜೀಪ್ ನರ್ಮದಾ ನದಿಗೆ ಉರುಳಿ 11 ಸಾವು
ರಾಮ್ ರಹೀಮ್ ವಿರುದ್ಧ ಹತ್ಯೆ,ಅತ್ಯಾಚಾರ ಆರೋಪ
ಒಪ್ಪಂದದ ಅನುಷ್ಠಾನ ವಿಳಂಬ: ಅಮರನಾಥ ಸಮಿತಿ ಎಚ್ಚರಿಕೆ
ಉತ್ತರ, ಪೂರ್ವ ಭಾರತದಲ್ಲಿ ಅಲ್ಪ ತೀವ್ರತೆಯ ಭೂಕಂಪ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...