|
| ಜೀಪ್ ನರ್ಮದಾ ನದಿಗೆ ಉರುಳಿ 11 ಸಾವು |
| ಖಾರ್ಗೋನಿ, ಶನಿವಾರ, 6 ಸೆಪ್ಟೆಂಬರ್ 2008 ( 16:05 IST ) | |
ಮಧ್ಯಪ್ರದೇಶದ ಬಡಾವ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಜೀಪೊಂದು ಸೇತುವೆಯ ಕಂಬಿಗಳನ್ನು ಮುರಿದು ನರ್ಮದಾ ನದಿಗೆ ಉರುಳಿ ಬಿದ್ದಿದ್ದರಿಂದ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ ಮತ್ತು ಇನ್ನೂ 7 ಮಂದಿ ಗಾಯಗೊಂಡಿದ್ದಾರೆ.
ಜೀಪಿನಿಂದ8 ದೇಹಗಳನ್ನು ಹೊರತೆಗೆಯಲಾಗಿದ್ದು, ಸೇತುವೆಯಿಂದ ಮೂರು ಕಿಮಿ ದೂರದಲ್ಲಿ ಇನ್ನೂ 3 ದೇಹಗಳನ್ನು ಪತ್ತೆಹಚ್ಚಲಾಗಿದೆ. ನದಿಯ ಆಚೆದಡದಲ್ಲಿದ್ದ ಅಂಜರುಡ್ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಸ್ವಗ್ರಾಮ ಬಾಮನ್‌ಪುರಿಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಾಪತ್ತೆಯಾದವರ ಶೋಧಕ್ಕಾಗಿ ಈಜುಗಾರರನ್ನು ನೇಮಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುತ್ತಿದ್ದ ಗ್ರಾಮಸ್ಥರಿಗೆ ಜೀಪು ನದಿಯಲ್ಲಿ ಮುಳುಗಿದ್ದು ಪತ್ತೆಯಾಯಿತೆಂದು ಹೇಳಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|