|
| ಉತ್ತರ, ಪೂರ್ವ ಭಾರತದಲ್ಲಿ ಅಲ್ಪ ತೀವ್ರತೆಯ ಭೂಕಂಪ |
| ನವದೆಹಲಿ, ಶನಿವಾರ, 6 ಸೆಪ್ಟೆಂಬರ್ 2008 ( 14:56 IST ) | |
ದೇಶದ ಉತ್ತರ ಹಾಗೂ ಪಶ್ಚಿಮ ಪ್ರದೇಶಗಳು ಇಂದು 5.8 ತೀವ್ರತೆಯ ಭೂಕಂಪದಿಂದ ತಲ್ಲಣಗೊಂಡಿತು. ಬೆಳಗ್ಗೆ 11.18 ಗಂಟೆಗೆ ಸಂಭವಿಸಿದ ಈ ಭೂಕಂಪದ ಕೇಂದ್ರ ಬಿಂದು ಅಪ್ಘಾನಿಸ್ತಾನದ ಹಿಂದು ಕುಶ್ ವಲಯದಲ್ಲಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ತೀವ್ರತೆಯ ಭೂಕಂಪ ನಿನ್ನೆಯೂ ಸಂಭವಿಸಿತ್ತು.
ಭಾರತದ ಉತ್ತರ ಹಾಗೂ ಪಶ್ಚಿಮ ಭಾಗಗಳಿಗೆ ಹೋಲಿಸಿದರೆ ಭೂಕಂಪದ ತೀವ್ರತೆ ಜಮ್ಮು ಕಾಶ್ಮೀರದಲ್ಲಿ ಅಧಿಕವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಭೂಕಂಪನ ದಿಲ್ಲಿ ಮತ್ತು ಎನ್‌ಸಿಆರ್‌ನಲ್ಲಿ ಅನುಭವಕ್ಕೆ ಬಂದಿದೆ. ಶ್ರೀನಗರ, ಜಮ್ಮು, ಭದ್ರಾವ್, ಪೂಂಚ್ ಮತ್ತು ಚಂಡೀಗಢದಲ್ಲಿ ಕಟ್ಟಡಗಳು ಕಂಪಿಸಿದ್ದು, ಜನರಲ್ಲಿ ಆತಂಕದ ವಾತಾವರಣ ಮೂಡಿಸಿತು. ಜನರು ಮನೆ ಮತ್ತು ಕಛೇರಿಗಳನ್ನು ಬಿಟ್ಟು ಹೊರಕ್ಕೆ ಓಡಿ ಬಂದರು.
ಈ ಭೂಕಂಪನದ ಕೇಂದ್ರ ಬಿಂದು 36.7 ಡಿಗ್ರಿ ಉತ್ತರ ಅಕ್ಷಾಂಶ ರೇಖೆ ಮತ್ತು 70.68 ಡಿಗ್ರಿ ಪೂರ್ವ ರೇಖಾಂಶದಲ್ಲಿ ನೆಲೆ ಗೊಂಡಿತ್ತು ಎಂದು ಎಂಇಟಿ ಇಲಾಖೆ ತಿಳಿಸಿದೆ. ಈವರೆಗೆ ಯಾವುದೇ ಸಾವು ನೋವು ಅಥವಾ ಆಸ್ತಿ ಹಾನಿಗಳ ಬಗ್ಗೆ ವರದಿಯಾಗಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|