ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಭುವನೇಶ್ವರ: ನಿಷೇಧಾಜ್ಞೆ ಹೇರಿಕೆ
ಭುವನೇಶ್ವರ್, ಶನಿವಾರ, 6 ಸೆಪ್ಟೆಂಬರ್ 2008   ( 13:24 IST )
ತಮ್ಮ ನಾಯಕನ ಹತ್ಯೆ ಶೋಕಾಚರಣೆಯಾಗಿ ಹಿಂದೂ ಪರ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಮೆರವಣಿಗೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ನಿಷೇಧಾಜೆಯನ್ನು ಹೇರಲಾಗಿದೆ.

ಸ್ವಾಮಿ ಲಕ್ಷ್ಮಣನಂದ ಸರಸ್ವತಿ ಹತ್ಯೆಯ ಶೋಕಾಚರಣೆಯಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ್ ದಲ್ ಶನಿವಾರದಂದು ಮೆರವಣಿಗೆ ನಡೆಸುವ ಘೋಷಣೆ ಮಾಡಿದ ಬಳಿಕ ಶುಕ್ರವಾರ ರಾತ್ರಿ ನಗರದ ಕನಿಷ್ಠ 5 ಸ್ಥಳಗಳಲ್ಲಿ ಐಪಿಸಿಯ 144 ಪರಿಚ್ಛೇದದಡಿ ನಿಷೇಧಾಜ್ಞೆಯನ್ನು ಹೇರಲಾಗಿದೆ.

ವಿಎಚ್‌ಪಿಯ ಕೇಂದ್ರ ಸಲಹಾ ಸಮಿತಿ ಸದಸ್ಯರಾಗಿದ್ದ ಸರಸ್ವತಿ ಮತ್ತು ನಾಲ್ಕು ಇತರ ಮಂದಿಯನ್ನು ಅಪರಿಚಿತ ವ್ಯಕ್ತಿಗಳು ಅಗಸ್ಟ್ 23ರಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪೊಲೀಸರು ಮಾವೋವಾದಿಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದರೆ, ಹಿಂದೂ ಪರ ಸಂಘಟನೆ ಹತ್ಯೆಗಾಗಿ ಕ್ರೈಸ್ತ ಧರ್ಮೀಯರ ಮೇಲೆ ಆರೋಪ ಹೊರಿಸಿದ್ದರು ಮತ್ತು ಹಿಂಸಾತ್ಮಕ ಪ್ರತಿಭಟನೆಗಿಳಿದಿದ್ದರು.

ಶನಿವಾರದ ಮೆರವಣಿಗೆ ಸಂದರ್ಭ ಮತ್ತೆ ಹಿಂಸಾಚಾರ ಭುಗಿಲೇಳುವ ಆತಂಕದೊಂದಿಗೆ, ಕಟಕ್ ರಫೀಲ್ ಚೀನತ್‌ನ ಆರ್ಕ್‌ಬಿಶಪ್ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೋರಿ ಅಹವಾಲು ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ನ್ಯಾಯಾಲಯ ರಾಜ್ಯ ಸರಕಾರದಿಂದ ವರದಿಯನ್ನು ಕೇಳಿತ್ತು. ರಾಜ್ಯದಲ್ಲಿ ಯಾವುದೇ ಮೆರವಣಿಗೆಗೆ ಅನುಮತಿ ನೀಡುವುದಿಲ್ಲ ಎಂಬುದಾಗಿ ಒರಿಸ್ಸಾ ಸರಕಾರ ಗುರುವಾರದಂದು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಂತರ್ಜಾತಿ ವಿವಾಹಕ್ಕೆ ಕುಮ್ಮಕ್ಕು: ವಿವಾದದಲ್ಲಿ ಚಿರಂಜೀವಿ
ಸಿಂಗುರ್ ಮಾತುಕತೆ ಗಮನಾರ್ಹ ಪ್ರಗತಿ
ಒಮ್ಮತಕ್ಕೆ ಬರದ ಎನ್ಎಸ್‌ಜಿ ಸಭೆ; ಮಾತುಕತೆ ವಿಸ್ತರಣೆ
ಪಕ್ಷೇತರರ ಕುರಿತು ಕೋಡಾ ಪುಸ್ತಕ
ಬಿಎಂಡಬ್ಲ್ಯು ಪ್ರಕರಣ: ನಂದಾಗೆ 5 ವರ್ಷ ಸೆರೆಮನೆವಾಸ
ಅಣುಬಂಧ: ಎನ್ಎಸ್‌ಜಿ ಆತಂಕ ನಿವಾರಿಸಲು ಭಾರತ ಯತ್ನ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...