|
| ಅಂತರ್ಜಾತಿ ವಿವಾಹಕ್ಕೆ ಕುಮ್ಮಕ್ಕು: ವಿವಾದದಲ್ಲಿ ಚಿರಂಜೀವಿ |
| ಹೈದರಾಬಾದ್, ಶನಿವಾರ, 6 ಸೆಪ್ಟೆಂಬರ್ 2008 ( 13:09 IST ) | |
ಅಂತರಜಾತೀಯ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ, ರಾಜಕಾರಣಿಯಾಗಿ ಪರಿವರ್ತನೆಯಾದ ಖ್ಯಾತ ನಟ ಚಿರಂಜೀವಿ, ವಧುವಿನ ಕುಟುಂಬದ ಆಕ್ಷೇಪಗಳಿಂದಾಗಿ ಈಗ ವಿವಾದಕ್ಕೆ ಸಿಕ್ಕಿಬಿದ್ದಿದ್ದಾರೆ. ಹೆಸರಾಂತ ದಲಿತ ಕಾರ್ಯಕರ್ತೆ ಮತ್ತು ಲೇಖಕಿ ಕೆ. ಪದ್ಮಾರಾವ್ ಪುತ್ರ ಚೇತನ್ ಮತ್ತು ಮೇಲ್ಜಾತಿಗೆ ಸೇರಿದ 24 ವರ್ಷ ಪ್ರಾಯದ ಎಂಜಿನಿಯರ್ ನಳಿನಿ ವಿವಾಹ ಸಮಾರಂಭದಲ್ಲಿ ಚಿರಂಜೀವಿ ಪಾಲ್ಗೊಂಡು ದಂಪತಿಯನ್ನು ಹರಸಿದರು.
ಅಂತರ್ಜಾತಿ ಮದುವೆಗಳ ಅನುಕೂಲದ ಬಗ್ಗೆ ಉತ್ಸಾಹಶಾಲಿಯಾಗಿ ಮಾತನಾಡಿದ ಅವರು ಜಾತಿರಹಿತ ಸಮಾಜ ನಿರ್ಮಾಣದ ಅಗತ್ಯವನ್ನು ಪ್ರತಿಪಾದಿಸಿದರು. ದಲಿತ ಯುವಕನ ವಿವಾಹದಲ್ಲಿ ಚಿತ್ರನಟನ ಉಪಸ್ಥಿತಿಯಿಂದ ವಧುವಿನ ತಂದೆತಾಯಿಗಳ ಜತೆ ಕಹಿವಿವಾದಕ್ಕೆ ದಾರಿಕಲ್ಪಿಸಿದೆ.
ತಮ್ಮ ಮಗಳನ್ನು ದಲಿತ ಲೇಖಕಿಯ ಕುಟುಂಬ ವಶದಲ್ಲಿಟ್ಟುಕೊಂಡು ಬಲಪ್ರಯೋಗದಿಂದ ಮದುವೆಮಾಡಿದ್ದಾರೆಂದು ಆಪಾದಿಸಿರುವ ವಧುವಿನ ಕುಟುಂಬ ಅದಕ್ಕೆ ಚಿತ್ರನಟ ಚಿರಂಜೀವಿ ಕುಮ್ಮಕ್ಕು ನೀಡಿದರೆಂದು ದೂರಿದ್ದಾರೆ. ಪದ್ಮಾರಾವ್ ಇತ್ತೀಚೆಗೆ ಚಿರಂಜೀವಿಯ ಪ್ರಜಾರಾಜ್ಯಂ ಸೇರಿದ್ದು, ಅದರ ಮುಖ್ಯ ಚುನಾವಣೆ ಘೋಷಣೆಯು ಸಾಮಾಜಿಕ ನ್ಯಾಯವಾಗಿರುವುದು ಕಾಕತಾಳೀಯವೆನಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|