|
| ಸಿಂಗುರ್ ಮಾತುಕತೆ ಗಮನಾರ್ಹ ಪ್ರಗತಿ |
| ಸಿಂಗುರ್, ಶನಿವಾರ, 6 ಸೆಪ್ಟೆಂಬರ್ 2008 ( 11:41 IST ) | |
ಸಿಂಗುರ್ ಬಿಕ್ಕಟ್ಟು ಕರಗುವ ಮೊದಲ ಲಕ್ಷಣ ಕಾಣಿಸುತ್ತಿದ್ದು, ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ತೃಣಮೂಲ ಕಾಂಗ್ರೆಸ್ ನೇತೃತ್ವದ ಕೃಷಿ ಜಮೀನ್ ರಕ್ಷಾ ಸಮಿತಿ ಮತ್ತು ಬಂಗಾಳ ಸರ್ಕಾರದ ಜತೆ ನಡೆಸಿದ ಮಾತುಕತೆಯ ಮೊದಲ ಸುತ್ತಿನಲ್ಲೇ ಸಣ್ಣದಾದರೂ ಗಮನಾರ್ಹ ಪ್ರಗತಿ ಕಂಡುಬಂದಿದೆ.
ಟಾಟಾ ಮೋಟರ್ಸ್ ಆವರಣದೊಳಗೆ ಪಶ್ಚಿಮಬಂಗಾಳ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಮೀಸಲಾದ 44 ಎಕರೆ ಭೂಮಿಯನ್ನು ಕೈಬಿಡಲು ಸರ್ಕಾರ ಒಪ್ಪಿದೆಯೆಂಬ ಊಹಾಪೋಹಗಳು ಹರಡಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಹೆಚ್ಚಳಕ್ಕೆ ಕೂಡ ಅದು ಒಪ್ಪಿದೆಯೆಂದು ತಿಳಿದುಬಂದಿದೆ. ತೃಣಮೂಲ ಕಾಂಗ್ರೆಸ್ ಕೂಡ ಸ್ವಲ್ಪ ಮೃದುಧೋರಣೆ ತಾಳಿದ್ದು, 400 ಎಕರೆ ಭೂಮಿ ಮರುಸ್ಥಾಪನೆ ಬದಲಿಗೆ 250 ಎಕರೆಗೆ ಇಳಿದಿರುವಂತೆ ಕಾಣುತ್ತಿದೆ.
ಆದರೆ ಮಾತುಕತೆಯು ಸಮಸ್ಯೆಮುಕ್ತವೆಂದು ಹೇಳುವಂತಿಲ್ಲ. ರಾಷ್ಟ್ರೀಯ ಹೆದ್ದಾರಿ 2ರಲ್ಲಿ ತಡೆಯನ್ನು ತೆರವು ಮಾಡುವ ತನಕ ರಾಜ್ಯಸರ್ಕಾರ ಮಾತುಕತೆಯಲ್ಲಿ ಭಾಗವಹಿಸಲು ನಿರಾಕರಿಸಿತು. ಅಂತಿಮವಾಗಿ ಮಮತಾ ಮಣಿದಾಗ ಹೆದ್ದಾರಿಯ ಒಂದು ಬದಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|