ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಒಮ್ಮತಕ್ಕೆ ಬರದ ಎನ್ಎಸ್‌ಜಿ ಸಭೆ; ಮಾತುಕತೆ ವಿಸ್ತರಣೆ
ವಿಯೆನ್ನಾ, ಶನಿವಾರ, 6 ಸೆಪ್ಟೆಂಬರ್ 2008   ( 08:56 IST )
ಭಾರತಕ್ಕೆ ಪೂರ್ಣ ವಿನಾಯಿತಿ ನೀಡುವುದರ ವಿರುದ್ಧ ಆಕ್ಷೇಪ ಹೊಂದಿರುವ ದೇಶಗಳ ಪೈಕಿ ಚೀನಾವು ತನ್ನ ಕೈಜೋಡಿಸುವುದರೊಂದಿಗೆ, ಎಸ್ಎಸ್‌ಜಿ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ ಆದರೆ ಈ ಕಡೆ ಅಮೆರಿಕ ಮಾತ್ರ ಮಹತ್ವಪೂರ್ಣ ಪ್ರಗತಿ ಸಾಧಿಸಿರುವ ಬಗ್ಗೆ ಪ್ರತಿಪಾದಿಸುತ್ತಿದ್ದು, ಈ ಬಗ್ಗೆ ಆಶಾಭಾವನೆಯಲ್ಲಿದೆ.

ಎರಡು ದಿನಗಳ ಸುದೀರ್ಘ ಮಾತುಕತೆ ಒಂದು ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದ್ದು, ಶನಿವಾರದಂದು ಮತ್ತೊಮ್ಮೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.

ಎರಡನೇ ದಿನದ ಸಭೆಯಲ್ಲಿ 5 ಸುತ್ತುಗಳ ಮಾತುಕತೆ ನಡೆದಿದ್ದು, ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ಮುಂದೆ ಕೊಂಡೊಯ್ಯಲು ಅಗತ್ಯವಾಗಿರುವ ಒಮ್ಮತವೊಂದಕ್ಕೆ ಬರುವಲ್ಲಿ ನಾನಾ ದೇಶದ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಭಾರೀ ಚರ್ಚೆ ನಡೆಸಿದರು.

ದಿನದಾದ್ಯಂತ ಆಗಿರುವ ಮಹತ್ವಪೂರ್ಣ ಪ್ರಗತಿಯಿಂದ ತಾವು ತೃಪ್ತಿಗೊಂಡಿದ್ದೇವೆ. ಅಣು ಪ್ರಸರಣ ಬದ್ಧತೆಗೆ ಸಂಬಂಧಿಸಿದಂತೆ ಭಾರತ ಅತ್ಯಂತ ಮಹತ್ವಪೂರ್ಣ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆ ಹೇಳಿಕೆ ಎಸ್‌ಎಸ್‌ಜಿ ಸದಸ್ಯ ರಾಷ್ಟ್ರಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಇದರಿಂದ ತಮಗೆ ದಿನದ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದು ಅಮೆರಿಕದ ಶಸ್ತ್ರ ನಿಯಂತ್ರಣ ವ್ಯವಹಾರದ ಉಸ್ತುವಾರಿ ಉಪಕಾರ್ಯದರ್ಶಿ ಜಾನ್ ರೂಡ್ ವರದಿಗಾರರಿಗೆ ತಿಳಿಸಿದ್ದಾರೆ.

ನಾಗರಿಕ ಪರಮಾಣು ಕ್ಷೇತ್ರದಲ್ಲಿನ ವ್ಯಾಪಾರಕ್ಕೆ ಅನುವು ಮಾಡಲು 45 ಸದಸ್ಯ ರಾಷ್ಟ್ರಗಳ ಎನ್ಎಸ್‌ಜಿಯಲ್ಲಿ ಒಮ್ಮತವೊಂದಕ್ಕೆ ಬರುವಲ್ಲಿ ಅಮೆರಿಕ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇದು ಒಂದು ಅತ್ಯಂತ ಪ್ರಮುಖ ವಿಷಯವಾಗಿದ್ದು, ತಮ್ಮ ಸಹವರ್ತಿಗಳು ಅತಿ ಗಂಭೀರ ಸ್ವರೂಪದ ಚರ್ಚೆ ನಡೆಸಿದರು. ತಾವು ತಮ್ಮ ಉದ್ದೇಶವನ್ನು ಸಾಧಿಸುವ ಬಗ್ಗೆ ತನಗೆ ಆಶಾಭಾವನೆ ಇದೆ ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಕ್ಷೇತರರ ಕುರಿತು ಕೋಡಾ ಪುಸ್ತಕ
ಬಿಎಂಡಬ್ಲ್ಯು ಪ್ರಕರಣ: ನಂದಾಗೆ 5 ವರ್ಷ ಸೆರೆಮನೆವಾಸ
ಅಣುಬಂಧ: ಎನ್ಎಸ್‌ಜಿ ಆತಂಕ ನಿವಾರಿಸಲು ಭಾರತ ಯತ್ನ
ಸರ್ಕಾರ, ತೃಣಮ‌ೂಲ ಮಾತುಕತೆ ಮುಂದೂಡಿಕೆ
ಶಿಕ್ಷಣದ ಮಹತ್ವ ಅರಿಯಲು ರಾಜಕಾರಣಿಗಳಿಗೆ ಪಿಎಂ ಕರೆ
ಅಸ್ಸಾಂ ಪ್ರವಾಹ ಗಂಭೀರ: ಸತ್ತವರ ಸಂಖ್ಯೆ 16
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...