ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಪಕ್ಷೇತರರ ಕುರಿತು ಕೋಡಾ ಪುಸ್ತಕ
ರಾಂಚಿ, ಶುಕ್ರವಾರ, 5 ಸೆಪ್ಟೆಂಬರ್ 2008   ( 19:57 IST )
ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಸಚಿವರಾಗಿರುವವರ ಸಾಮರ್ಥ್ಯ ಕುರಿತು ತಾನೊಂದು ಪುಸ್ತಕ ಬರೆಯುವುದಾಗಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಹಾಲಿ ಉಪಮುಖ್ಯಮಂತ್ರಿ ಮಧುಕೋಡಾ ಹೇಳಿದ್ದಾರೆ.

ಜಾರ್ಖಂಡ್‌ನ ಹಾಲಿ ಮುಖ್ಯಮಂತ್ರಿ ಶಿಬುಸೊರೇನ್‌ಗಾಗಿ ತಮ್ಮ ಸ್ಥಾನವನ್ನು ಧಾರೆಎರೆದಿರುವ ಕೋಡಾ, ಸ್ವಯಂ ಪಕ್ಷೇತರರಾಗಿ ಮುಖ್ಯಮಂತ್ರಿ ಗದ್ದುಗೆಯನ್ನು ಏರಿದವರು. ತಾನೊಬ್ಬ ಪಕ್ಷೇತರನಾಗಿದ್ದರೂ, ಇತರ ಪ್ರಮುಖ ಪಕ್ಷಗಳ ಸಹಾಯದಿಂದ ಸಮ್ಮಿಶ್ರಕೂಟದ ರಾಜಕೀಯದ ಒತ್ತಡಗಳನ್ನು ನಿಭಾಯಿಸಿಕೊಂಡು ಸುಮಾರು ಎರಡು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ರಾಜಕೀಯ ಅಂಕಿಸಂಖ್ಯೆಗಳ ಲೆಕ್ಕಾಚಾರದಲ್ಲಿ ಪಕ್ಷೇತರರಿಗೆ ಮಣೆ ಹಾಕುವ ಹಿನ್ನೆಲೆಯಲ್ಲಿ ಪಕ್ಷೇತರರು ಆಡಳಿತವನ್ನೇ ಅಪಹರಿಸುತ್ತಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.

ಹಾಗೆ ನೋಡಿದರೆ ಕೋಡಾ ಅವರಿಗೆ ಬರವಣಿಗೆ ಹೊಸದಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಪ್ನೋಂಕಿ ರಹಾ ಪರ್ (ಕನಸಿನ ಹಾದಿಯಲ್ಲಿ) ಎಂಬ ಪುಸ್ತಕ ಬರೆದಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿಎಂಡಬ್ಲ್ಯು ಪ್ರಕರಣ: ನಂದಾಗೆ 5 ವರ್ಷ ಸೆರೆಮನೆವಾಸ
ಅಣುಬಂಧ: ಎನ್ಎಸ್‌ಜಿ ಆತಂಕ ನಿವಾರಿಸಲು ಭಾರತ ಯತ್ನ
ಸರ್ಕಾರ, ತೃಣಮ‌ೂಲ ಮಾತುಕತೆ ಮುಂದೂಡಿಕೆ
ಶಿಕ್ಷಣದ ಮಹತ್ವ ಅರಿಯಲು ರಾಜಕಾರಣಿಗಳಿಗೆ ಪಿಎಂ ಕರೆ
ಅಸ್ಸಾಂ ಪ್ರವಾಹ ಗಂಭೀರ: ಸತ್ತವರ ಸಂಖ್ಯೆ 16
ಅಣುಬಂಧ: ಎನ್ಎಸ್‌ಜಿಯಲ್ಲಿ ಭಾರತ ಪರ ನಿರ್ಣಯ ಸಂಭವ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...