ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಬಿಎಂಡಬ್ಲ್ಯು ಪ್ರಕರಣ: ನಂದಾಗೆ 5 ವರ್ಷ ಸೆರೆಮನೆವಾಸ
ನವದೆಹಲಿ, ಶುಕ್ರವಾರ, 5 ಸೆಪ್ಟೆಂಬರ್ 2008   ( 16:25 IST )
ಬಿಎಂಡಬ್ಲ್ಯು ಹಿಟ್ ಆಂಡ್ ರನ್ ಪ್ರಕರಣದ ಪ್ರಮುಖ ಅಪರಾಧಿ ಸಂಜೀವ್ ನಂದಾಗೆ ದೆಹಲಿಯ ನ್ಯಾಯಾಲಯ ಶುಕ್ರವಾರ ಐದು ವರ್ಷಗಳ ಸೆರೆಮನೆವಾಸ ಶಿಕ್ಷೆ ವಿಧಿಸಿದೆ. ಸಹ ಅಪರಾಧಿಗಳಾಗಿರುವ ರಾಜೀವ ಗುಪ್ತಾನಿಗೆ ಒಂದು ವರ್ಷ ಮತ್ತು ಇನ್ನೊರ್ವ ಭೋಲಾ ಶ್ಯಾಮ್‌ಗೆ ಆರು ತಿಂಗಳ ಶಿಕ್ಷೆ ವಿಧಿಸಲಾಗಿದೆ.

ನಂದಾ ಈಗಾಗಲೇ ಒಂಭತ್ತು ತಿಂಗಳ ಕಾಲ ಜೈಲುವಾಸ ಪೂರೈಸಿದ್ದು, ಅದನ್ನು ಈ ಐದು ವರ್ಷಗಳ ಅವಧಿಯ ಶಿಕ್ಷೆಯಿಂದ ಕಡಿತಗೊಳಿಸಲಾಗುವುದು ಎಂದು ಹೆಚ್ಚುವರಿ ಸೆಶನ್ ನ್ಯಾಯಾಧೀಶ ವಿನೋದ್ ಕುಮಾರ್ ತಿಳಿಸಿದ್ದಾರೆ. ನಂದಾ ಮೇಲೆ ನ್ಯಾಯಾಲಯ ಯಾವುದೇ ದಂಡವನ್ನು ವಿಧಿಸಿಲ್ಲ.

ಆದರೆ ಸಹ ಅಪರಾಧಿಯಾದ ಗುಪ್ತಾ ಮೇಲೆ 10,000 ರೂ. ದಂಡವನ್ನು ವಿಧಿಸಿದ್ದರೆ, ಆತನ ಈರ್ವ ಉದ್ಯೋಗಿಗಳ ಮೇಲೆ ತಲಾ 100 ರೂಪಾಯಿ ದಂಡವನ್ನು ಹೇರಲಾಗಿದೆ.

1999ರ ಜನವರಿಯಲ್ಲಿ ಈ ಪ್ರಕರಣ ಸಂಭವಿಸಿದ್ದು, ಅಪಘಾತದಲ್ಲಿ ಪೊಲೀಸರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಒಂಭತ್ತೂವರೆ ವರ್ಷಗಳ ಕಾಲದ ಸುದೀರ್ಘ ಅವಧಿಯ ವಿಚಾರಣೆಯ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ.

ಸರಕಾರಿ ವಕೀಲರು ನಂದಾಗೆ 10 ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ಸೆಪ್ಟಂಬರ್ ಎರಡರಂದು ನ್ಯಾಯಾಲಯವು ನಂದಾ ದೋಷಿ ಎಂದು ತೀರ್ಪು ನೀಡಿದ್ದು ಶುಕ್ರವಾರ ಶಿಕ್ಷೆಯ ಪ್ರಮಾಣ ಘೋಷಿಸಿದೆ.

ಈ ಪ್ರಕರಣವು ಸಾಕಷ್ಟು ಸುದ್ದಿಮಾಡಿದ್ದು, ನಂದಾ ಪರ ವಕೀಲರು ಮತ್ತು ಸರಕಾರಿ ವಕೀಲರು ಸಾಕ್ಷಿಯ ಮೇಲೆ ಪ್ರಭಾವ ಬೀರಲು ಯತ್ನಸಿದ್ದು, ಇಬ್ಬರ ಹಿರಿಯ ವಕೀಲರಾದ ಆರ್.ಕೆ.ಆನಂದ್ ಮತ್ತು ಐ.ಯು.ಖಾನ್ ಅವರುಗಳು ದೆಹಲಿ ಹೈಕೋರ್ಟ್ ಮತ್ತು ಆಧೀನ ನ್ಯಾಯಾಲಯಗಳಲ್ಲಿ ನಾಲ್ಕು ತಿಂಗಳ ನಿಷೇಧ ಹೇರಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಣುಬಂಧ: ಎನ್ಎಸ್‌ಜಿ ಆತಂಕ ನಿವಾರಿಸಲು ಭಾರತ ಯತ್ನ
ಸರ್ಕಾರ, ತೃಣಮ‌ೂಲ ಮಾತುಕತೆ ಮುಂದೂಡಿಕೆ
ಶಿಕ್ಷಣದ ಮಹತ್ವ ಅರಿಯಲು ರಾಜಕಾರಣಿಗಳಿಗೆ ಪಿಎಂ ಕರೆ
ಅಸ್ಸಾಂ ಪ್ರವಾಹ ಗಂಭೀರ: ಸತ್ತವರ ಸಂಖ್ಯೆ 16
ಅಣುಬಂಧ: ಎನ್ಎಸ್‌ಜಿಯಲ್ಲಿ ಭಾರತ ಪರ ನಿರ್ಣಯ ಸಂಭವ
ವೈಥಿಲಿಂಗಂ ಪುದುಚೇರಿ ಮುಖ್ಯಮಂತ್ರಿಯಾಗಿ ಪ್ರಮಾಣ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...