|
| ಅಣುಬಂಧ: ಎನ್ಎಸ್‌ಜಿ ಆತಂಕ ನಿವಾರಿಸಲು ಭಾರತ ಯತ್ನ |
| ನವದೆಹಲಿ, 5 ಸೆಪ್ಟೆಂಬರ್ 2008 ( 16:11 IST ) | |
ಕೆಲವು ಎನ್‌ಎಸ್‌ಜಿ ರಾಷ್ಟ್ರಗಳ ಭೀತಿಯನ್ನು ನಿವಾರಿಸುವ ಯತ್ನವಾಗಿ ಭಾರತವು ಅಣ್ವಸ್ತ್ರ ಪ್ರಸರಣ ನಿಷೇಧವನ್ನು ಬಲಪಡಿಸುವುದಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದು, ಅಣ್ವಸ್ತ್ರಗಳನ್ನು ಮೊದಲಿಗೆ ಬಳಸದಿರುವ ನೀತಿಯನ್ನು ಪ್ರತಿಪಾದಿಸಿದೆ.
ವಿಯೆನ್ನಾದಲ್ಲಿ ಭಾರತದ ಪರಮಾಣು ವ್ಯಾಪಾರಕ್ಕೆ ವಿನಾಯತಿ ನೀಡುವ ಎನ್‌ಎಸ್‌ಜಿ ಸಭೆ ನಡೆಯುತ್ತಿರುವ ನಡುವೆ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿಕೆಯೊಂದನ್ನು ನೀಡಿ, ಅಣ್ವಸ್ತ್ರ ಪ್ರಸರಣ ನಿಷೇಧದ ಸಮಾನ ಉದ್ದೇಶವನ್ನು ಈಡೇರಿಸಲು ಅಂತಾರಾಷ್ಟ್ರೀಯ ಸಮುದಾಯದ ಜತೆ ಕೆಲಸ ಮಾಡುವುದಾಗಿ ತಿಳಿಸಿದರು.
ಪರಮಾಣು ಸಂಸ್ಕರಣೆ ಮತ್ತು ಮರುಸಂಸ್ಕರಣೆ ವರ್ಗಾವಣೆಗಳು ಸೇರಿದಂತೆ ಸೂಕ್ಷ್ಮ ತಂತ್ರಜ್ಞಾನಗಳ ಪ್ರಸರಣಕ್ಕೆ ಭಾರತ ಮೂಲವಾಗುವುದಿಲ್ಲ ಎಂದು ಅವರು ವಿಶ್ವಸಮುದಾಯಕ್ಕೆ ಭರವಸೆ ನೀಡಿದರು. ಅಣ್ವಸ್ತ್ರ ಪರೀಕ್ಷೆಯ ಸ್ವಯಂಇಚ್ಛೆಯ ಮತ್ತು ಏಕಪಕ್ಷೀಯ ನಿಯಂತ್ರಣಕ್ಕೆ ಭಾರತ ಬದ್ಧವಾಗಿದೆ ಎಂದೂ ಮುಖರ್ಜಿ ತಿಳಿಸಿದರು.
ಅಣುವ್ಯಾಪಾರಕ್ಕಾಗಿ ಭಾರತಕ್ಕೆ ವಿನಾಯಿತಿ ನೀಡುವ ನಿರ್ಧಾರವನ್ನು ಕುರಿತು ಅಣು ಪೂರೈಕೆ ರಾಷ್ಟ್ರಗಳ ಸಮೂಹದ ಕೆಲವು ಸದಸ್ಯ ರಾಷ್ಟ್ರಗಳಿಗಿರುವ ಅನುಮಾನಗಳನ್ನು ತೊಡೆದು ಹಾಕುವ ನಿಟ್ಟಿನಿಂದ ಭಾರತದ ಹಿರಿಯ ಅಧಿಕಾರಿಗಳು ಇಂತಹ ರಾಷ್ಟ್ರಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಅವರ ಮನಒಲಿಸಲು ಪ್ರಯತ್ನಿಸಿದ್ದಾರೆ.
ಭಾರತಕ್ಕೆ ವಿನಾಯಿತಿ ನೀಡುವ ಪರವಾಗಿ ಎನ್‌ಎಸ್‌ಜಿಯು ತೀರ್ಮಾನ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ಭಾರತದ ಮೂವತ್ತು ವರ್ಷಗಳ ಪ್ರತ್ಯೇಕತೆ ಅಂತ್ಯಗೊಳ್ಳಲಿದೆ ಎಂದು ನಿರಿಕ್ಷೀಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|