ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸರ್ಕಾರ, ತೃಣಮ‌ೂಲ ಮಾತುಕತೆ ಮುಂದೂಡಿಕೆ
ಕೋಲ್ಕತಾ, ಶುಕ್ರವಾರ, 5 ಸೆಪ್ಟೆಂಬರ್ 2008   ( 13:58 IST )
ಸಿಂಗುರ್ ರೈತರ ಜಮೀನು ವಿವಾದದ ಇತ್ಯರ್ಥಕ್ಕೆ ರಾಜ್ಯಸರ್ಕಾರದ ಪ್ರತಿನಿಧಿಗಳು ಮತ್ತು ತೃಣಮ‌ೂಲ ಕಾಂಗ್ರೆಸ್ ನೇತೃತ್ವದ ಸಮಿತಿಯ ಜತೆ ಪಶ್ಚಿಮಬಂಗಾಳದ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಅವರ ಮಾತುಕತೆಯನ್ನು ಶುಕ್ರವಾರ ಸಂಜೆ 4 ಗಂಟೆಗೆ ಮುಂದೂಡಲಾಗಿದೆ. ರಾಜ್ಯಸರ್ಕಾರವು ಈ ಕುರಿತು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಮಾತುಕತೆಯನ್ನು ಮುಂದಕ್ಕೆ ಹಾಕಲಾಗಿದೆ.

ಸಭೆಯಲ್ಲಿ ಕಾನೂನು ಸಲಹೆ ನೀಡುವಂತೆ ಮುಂಬೈ ಹೈಕೋರ್ಟ್ ಮಾಜಿ ಮುಖ್ಯನ್ಯಾಯಮ‌ೂರ್ತಿ ಚಿತ್ತತೋಷ್ ಮುಖರ್ಜಿ ಅವರಿಗೆ ಸಹ ರಾಜ್ಯಪಾಲರು ಮನವಿ ಮಾಡಿದ್ದಾರೆ. ಮಾತುಕತೆಗೆ ಮುನ್ನ ತೃಣಮ‌ೂಲ ಕಾಂಗ್ರೆಸ್ ಪ್ರತಿಭಟನೆಯಿಂದ ಹಿಂದೆ ಸರಿಯಬೇಕೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಕೂಡ ಒತ್ತಾಯಿಸಿದ್ದಾರೆ.

ಪ್ರತಿಪಕ್ಷವು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಮಾತುಕತೆ ಕಾಲದಲ್ಲಿ ಹೆದ್ದಾರಿಯ ಎರಡೂ ಕಡೆಗಳನ್ನು ಮುಕ್ತವಾಗಿರಿಸಬೇಕೆಂದು ಕೇಳಿರುವುದಾಗಿ ಅವರು ತಿಳಿಸಿದರು. "ಪ್ರತಿಪಕ್ಷವು ಮನವಿಗೆ ಸ್ಪಂದಿಸುವ ತನಕ ಮಾತುಕತೆಯನ್ನು ಸ್ಥಗಿತಗೊಳಿಸಲು ರಾಜ್ಯಪಾಲರು ನಿರ್ಧರಿಸಿದ್ದಾರೆ.

ಕಾಜ್ಯಪಾಲರ ಮನವಿಗೆ ಪ್ರತಿಪಕ್ಷವು ಪ್ರತಿಕ್ರಿಯಿಸಬೇಕು. ಕಳೆದ ಒಂದು ವಾರದಿಂದ ತಾವು ರತನ್ ಟಾಟಾ ಜತೆ ಮಾತನಾಡಿಲ್ಲ. ರಾಜ್ಯಪಾಲರು ಇಚ್ಛಿಸುವುದಾದರೆ ತಾವು ಸಭೆಯಲ್ಲಿ ಉಪಸ್ಥಿತರಿರುವುದಾಗಿ" ಬುದ್ಧದೇವ್ ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶಿಕ್ಷಣದ ಮಹತ್ವ ಅರಿಯಲು ರಾಜಕಾರಣಿಗಳಿಗೆ ಪಿಎಂ ಕರೆ
ಅಸ್ಸಾಂ ಪ್ರವಾಹ ಗಂಭೀರ: ಸತ್ತವರ ಸಂಖ್ಯೆ 16
ಅಣುಬಂಧ: ಎನ್ಎಸ್‌ಜಿಯಲ್ಲಿ ಭಾರತ ಪರ ನಿರ್ಣಯ ಸಂಭವ
ವೈಥಿಲಿಂಗಂ ಪುದುಚೇರಿ ಮುಖ್ಯಮಂತ್ರಿಯಾಗಿ ಪ್ರಮಾಣ
ರೈತರ ಸಂತೃಪ್ತಿಗೆ ಸರ್ಕಾರದ ಹೊಸ ಪ್ಯಾಕೇಜ್
ಭಾರತ-ಬಾಂಗ್ಲಾ ಗಡಿಯಲ್ಲಿ ಹೊಸ ಸ್ತಂಭ ಸ್ಥಾಪನೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...