|
|
ಶಿಕ್ಷಣದ ಮಹತ್ವ ಅರಿಯಲು ರಾಜಕಾರಣಿಗಳಿಗೆ ಪಿಎಂ ಕರೆ |
| ಚೆನ್ನೈ, ಶುಕ್ರವಾರ, 5 ಸೆಪ್ಟೆಂಬರ್ 2008 ( 13:39 IST ) | |
ಸಾರ್ವಜನಿಕ ಚರ್ಚೆಯ ಗಣನೀಯ ಪಾಲು ಪ್ರಸಕ್ತ ಅಲ್ಪಕಾಲೀನ ಸಮಸ್ಯೆಗಳತ್ತಲೇ ಕೇಂದ್ರಿತವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಅಗತ್ಯದ ಬಗ್ಗೆ ಅರಿಯುವಂತೆ ರಾಜಕೀಯ ನಾಯಕರಿಗೆ ಕರೆ ನೀಡಿದ್ದಾರೆ.
ದುರದೃಷ್ಟವಶಾತ್, ಪ್ರಸಕ್ತ ಸಾರ್ವಜನಿಕ ಚರ್ಚೆಯ ಗಣನೀಯ ಪಾಲು ಅಲ್ಪಕಾಲೀನ ಸಮಸ್ಯೆಗಳಿಗೇ ಮೀಸಲಾಗಿದೆ. ಬೆಳವಣಿಗೆ ಮತ್ತು ಅಭಿವೃದ್ಧಿ ಹಾಗೂ ಅವಕಾಶಗಳ ಬಹು ಆವರಿತ ವಿಸ್ತರಣೆಯ ಸವಾಲಿಗೆ ತಾವು ಹೆಚ್ಚಿನ ಗಮನವನ್ನು ನೀಡುತ್ತಿಲ್ಲ ಎಂದು ಅವರು ಮೆಡ್ರಾಸ್ ವಿಶ್ವವಿದ್ಯಾನಿಲಯದ 150ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಹೇಳಿದರು.
ತಮ್ಮ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವಂತೆ ತಾನು ತಮ್ಮ ರಾಜಕೀಯ ನಾಯಕರನ್ನು ಕೋರುತ್ತಿದ್ದೇನೆ ಎಂದು ಹೇಳಿದ ಅವರು, ಅವಕಾಶಗಳ ವಿಸ್ತರಣೆ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶಗಳ ಮೇಲೆ ರಾಜಿ ಮಾಡಕೂಡದು ಎಂದು ತಿಳಿಸಿದರು.
ಎಲ್ಲಾ ಯೋಗ್ಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಬಗ್ಗೆ ಗಮನ ಹರಿಸುವಂತೆ ಪ್ರತಿಪಾದಿಸಿರುವ ಸಿಂಗ್, ಸಮಾಜದ ಹಿಂದುಳಿದಿರುವ ವರ್ಗ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳದಿದ್ದರೆ, ತನ್ನ ಸಂಪೂರ್ಣ ಅಭಿವೃದ್ಧಿ ಸಂಭಾವ್ಯತೆಯನ್ನು ಭಾರತ ಅರಿತುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ಈ ಗುರಿಯನ್ನು ಸಾಧಿಸಲು ಕೊಡುಗೆ ನೀಡಲೇಬೇಕು ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|